ಬಂಟ್ವಾಳ: ಇಲ್ಲಿನ  ನಾವೂರ ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನವು ಸುಮಾರು 3.50 ಕೋ.ರೂ.ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿದ್ದು, ಈ ಪ್ರಯುಕ್ತ ಗ್ರಾಮಸ್ಥರು,ಭಕ್ತಾದಿಗಳು ಶ್ರಮದಾನ ಗೈದರು.        ಜ.11 ರಿಂದ ಜ. 18 ರವರೆಗೆ ದೇವಳದಲ್ಲಿ ಅಷ್ಟಬಂಧ ,ಬ್ರಹ್ಮಕಶೋತ್ಸವ ನಡೆಯಲಿದ್ದು ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ.

IMG-20191223-WA0091

 

IMG-20191223-WA0092

ಈ ಸಂದರ್ಭ ಮಾತನಾಡಿದ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸದಾನಂದ ನಾವೂರ ಅವರು 5 ಗ್ರಾಮಗಳಿಗೆ ಸೇರಿದ ಈ ದೇವಸ್ಥಾನದ ನವೀಕರಣ ಬ್ರಹ್ಮಕಲಶೋತ್ಸವಕ್ಕೆ ಐದು ಗ್ರಾಮಗಳ ಭಕ್ತಾದಿಗಳು ದಿನಂಪ್ರತಿ ನೂರಾರು ಸಂಖ್ಯೆಯಲ್ಲಿ ಕರಸೇವೆಯಲ್ಲಿ ಭಾಗಿಯಾಗುತ್ತಿದ್ದಾರೆ.ಊರ,ಪರ ಊರಿನ ಭಕ್ತಾದಿಗಳ ಸಹಕಾರದಿಂದ ದೇವಳದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ  ಎಂದು ಹೇಳಿದರು. ಕರಸೇವೆಯಲ್ಲಿ ಗ್ರಾಮಸ್ಥರ ಜೊತೆಗೆ  ಬ್ರಹ್ಮಕಲಶೋತ್ಸವ ಹಾಗೂ  ವಿವಿಧ ಸಮಿತಿಗಳ ಮುಖ್ಯಸ್ಥರು, ಸದಸ್ಯರುಗಳು,  ಮಹಿಳಾ ಸಮಿತಿ ಸದಸ್ಯರುಗಳು ಭಾಗಿಯಾಗುತ್ತಿದ್ದಾರೆ ಎಂದು ಅವರು ಹೇಳಿದರು.

By suddi9

Leave a Reply

Your email address will not be published. Required fields are marked *