ವಿಟ್ಲ ಶ್ರೀ ಸಿದ್ಧಿಗಣಪತಿ ಸಹಿತ ವಿದ್ಯಾ ಸರಸ್ವತಿ ಮಹಾಯಾಗ ಸಮಿತಿ ಮತ್ತು ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರ ಇದರ ಸಹಯೋಗದೊಂದಿಗೆ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಶ್ರೀ ಸಿದ್ಧಿಗಣಪತಿ ಸಹಿತ ವಿದ್ಯಾ ಸರಸ್ವತಿ ಮಹಾಯಾಗವು 29-12-2019ನೇ ಆದಿತ್ಯವಾರ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಲಿದೆ.
ಈ ಸಮಿತಿಯ ಕಾರ್ಯಾಲಯವನ್ನು ಮಾಣಿಲ ಶ್ರೀಧಾಮದ ಶ್ರೀ ಶ್ರೀ ಮೋಹನದಾಸ ಸ್ವಾಜಿಯವರು ಉದ್ಘಾಟಿಸಿ ಶುಭ ಹಾರೈಸಿದರು. ಮಹಾಯಾಗ ಸಮಿತಿ ಅಧ್ಯಕ್ಷ ರಾಘವೇಂದ್ರ ಪೈ ಸ್ವಾಗತಿಸಿ ನಿರೂಪಿಸಿದರು. ವಿಟ್ಲ ಕೇತ್ರ ಬಾಲಕೋಕುಲ ಸಮಿತಿ ಅಧ್ಯಕ್ಷ ಹರೀಶ್ ವಂದಿಸಿದರು.
