ಮೈಸೂರು : ದಕ್ಷಿಣ ಕರ್ನಾಟಕದ ಗಂಡುಕಲೆ ಎಂದೇ ಪ್ರಸಿದ್ಧ ಯಕ್ಷಗಾನ. ಸಾಮಾನ್ಯವಾಗಿ ಯಕ್ಷಗಾನದಲ್ಲಿ ಐತಿಹಾಸಿಕ ಘಟನೆ, ಪುರಾಣ ಕಥೆಗಳು ಮಾತ್ರ ಪ್ರದರ್ಶನವಾಗುತ್ತವೆಯಾದರೂ ಕೆಲವೊಮ್ಮೆ ವ್ಯಕ್ತಿಯಾಧಾರಿತ ಪ್ರಸಂಗಗಳು ಪ್ರಸ್ತುತವಾದ ನಿದರ್ಶನಗಳಿವೆ. ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಜೀವನದ ಯಶೋಗಾಥೆ ಯಕ್ಷಘಾನ ರೂಪ ಪಡೆಯಲು ಸಜ್ಜಾಗಿ ನಿಂತಿದೆ. ಯಕ್ಷಗಾನ ಪ್ರಸಂಗದ ತಯಾರಿ ಮುಕ್ತಾಯವಾಗಿದ್ದು ಇದೀಗ ‘ನರೇಂದ್ರ ವಿಜಯ’ ಎಂಬ ಪುಸ್ತಕವನ್ನು ಮಂಗಳವಾರ ಮೈಸೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಡುಗಡೆಗೊಳಿಸಿದ್ದಾರೆ.

87f70feb-b843-4d0a-8e47-064a577f39e3
ಈ ‘ನರೇಂದ್ರ ವಿಜಯ’ ಎಂಬ ಪುಸ್ತಕವನ್ನು ತೀರ್ಥಹಳ್ಳಿಯ ಜ್ಯೋತಿ ಶಾಸ್ತ್ರಿ ಎಂಬುವವರು ಬರೆದಿದ್ದು , ನರೇಂದ್ರ ಮೋದಿಯವರ ಬಾಲ್ಯ, ಜೀವನಶೈಲಿ, ರಾಜಕೀಯ ಹಿನ್ನೆಲೆ ಸೇರಿದಂತೆ ಅವರ ಬದುಕಿನ ಹಲವು ಘಟನೆಗಳ ಬಗ್ಗೆ ಪ್ರಸ್ತಾಪವಿದೆ. ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆಯಲ್ಲಿ ಹುಣಸೂರು ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್, ಶಾಸಕ ನಾಗೇಂದ್ರ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *