ಕೋಲಾರ : ನಗರದ 2ನೇ ವಾರ್ಡ್ ಗಾಂಧಿನಗರದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಸುಮಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಮೊದಲಿಗೆ ನೀರಿನ ಸೌಲಭ್ಯ ಮತ್ತು ಕಸ ವಿಲೇವಾರಿ ಮಾಡಿಕೊಡಬೇಕೆಂದು ನೂತನ ನಗರಸಭಾ ಸದಸ್ಯ ಎನ್.ಎಸ್. ಪ್ರವೀಣ್ ಪೌರಾಯುಕ್ತರಲ್ಲಿ ಮನವಿಸಲ್ಲಸಿದರು.NAGARASABE

ಮನವಿಗೆ ಸ್ಪಂಧಿಸಿ ಇಂದು ಗಾಂಧಿನಗರಕ್ಕೆ ಭೇಟಿ ನೀಡಿದ ಪೌರಾಯುಕ್ತ ಶ್ರೀಕಾಂತ್ ರವರು ಈ ಹಿಂದೆ ಮೂರು ತಿಂಗಳ ಅವಧಿಗೆ ನಗರಸಭೆ ಪೌರಾಯುಕ್ತರಾಗಿ ಕಾರ್ಯ ನಿರ್ವಹಿಸಿದ ಸಂದರ್ಭದಲ್ಲಿ ಸ್ಥಳೀಯ ತೊಟ್ಟಿಬಾವಿ ದುರಸ್ತಿ ಮಾಡಿಸಿ ನೀರಿನ ಸರಬರಾಜಿಗೆ ಆಧ್ಯತೆ ನೀಡಲಾಗಿತ್ತು ಆದರೆ ಈಗ ಕೆಲವು ಬೋರ್‍ವೆಲ್‍ಗಳು ತಾಂತ್ರಿಕ ದೋಷದಿಂದ ನಿಂತು ಹೋಗಿರುವ ಪರಿಣಾಮ ನೀರಿನ ಸಮಸ್ಯೆ ಉಂಟಾಗಿದೆ. ಹಾಗಾಗಿ ಕೂಡಲೇ ನೀರಿನ ಸಮಸ್ಯೆ ನಿವಾರಿಸುವ ಕುರಿತು ಭರವಸೆ ನೀಡಿದರು. ಮತ್ತು ಎರಡು ದಿನದಲ್ಲಿ ಪೌರ ಕಾರ್ಮಿಕರನ್ನು ಗಾಂಧಿನಗರಕ್ಕೆ ಕಳುಹಿಸಿ ಚರಂಡಿ ಮತ್ತು ಕಸ ವಿಲೇವಾರಿ ಮಾಡಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಎನ್.ಎಸ್.ಪ್ರವೀಣ್, ನಗರಸಭೆ ಆರೋಗ್ಯ ಅಧಿಕಾರಿ ಮರಿಯಾ, ದೀಪ, ಪೌರ ಕಾರ್ಮಿಕ ಶೆಟ್ಟೆಪ್ಪ, ಮುಖಂಡರದ ಚೇತನ್ ಬಾಬು, ಸುಧಾಕರ್ ಮುಂತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *