ಕೋಲಾರ: ಚುನಾವಣೆ ದಿನ ಸನ್ನಿಹಿತವಾಗುತ್ತಿದ್ದಂತೆ ಕ್ಷೇತ್ರದ ಬಹುತೇಕ ಕಡೆ ಮೂಡಿದ ಆತಂಕ ಇನ್ನಿಲ್ಲದ ಅನಾಹುತಗಳಿಗೆ ಎಡೆ ಮಾಡಿಕೊಟ್ಟಿದೆ.ನಗರದ 6ನೇ ವಾರ್ಡ್, ಕೋಗಿಲಹಳ್ಳಿಯಲ್ಲಿ ಚುನಾವಣೆಗೆ ಹಣ ಹಂಚುವ ವಿಷಯದಲ್ಲಿ ಶುರುವಾಗಿ, ಶನಿವಾರ ನಡೆದ ಹೊಡೆದಾಟ ಪ್ರಕರಣವು ಬರೋಬ್ಬರಿ 6 ಜನ ಮಾರಣಾಂತಿಕ ಹಲ್ಲೆಗೊಳಗಾಗಿ ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದರೊಂದಿಗೆ ದುಃಖಾಂತ್ಯವನ್ನು ಕಂಡಿದೆ.11nbk1 special news

ಹೆಂಗಸು ಎಂದೂ ನೋಡದೇ ಮಹಿಳೆಯನ್ನೂ ಸೇರಿ 6 ಜನ ಪ್ರಸ್ತುತ ಚಿಕಿತ್ಸೆಯಲ್ಲಿದ್ದಾರೆ. ಗಲಾಟೆ ನಡೆದ ಕೂಡಲೇ ಸಂಬಂಧಿಸಿದ ಕೋಲಾರ ನಗರ ಪೊಲೀಸರಿಗೆ ದೂರು ನೀಡಿದ್ದರೂ, ಪೊಲೀಸರು ಯಾವುದೇ ಕಾನೂನು ಕ್ರಮ ಜರುಗಿಸದೇ ಕೈಚೆಲ್ಲಿದ್ದಾರೆ, ನಾವೆಲ್ಲಾ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಊರಿಗೆ ಮರಳಲು ಹೆದರಿ ಇಲ್ಲಿಯೇ ತಲೆ ಮರೆಸಿಕೊಂಡು ಕುಳಿತ್ತಿದ್ದೇವೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ.

By suddi9

Leave a Reply

Your email address will not be published. Required fields are marked *