ಶ್ರೀನಿವಾಸಪುರ :ಆಲವಟ್ಟ ಗ್ರಾಮದಲ್ಲಿ ವೈದೇಹಿ ಸಂಶೋಧನಾ ಕೇಂದ್ರದವರು ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರವನ್ನು ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಎನ್. ಶ್ರೀರಾಮರೆಡ್ಡಿ ಉಧ್ಘಾಟಿಸಿದರು. ಇತ್ತೀಚಿಗೆ ಬದಲಾದ ಆಹಾರ ಪದ್ದತಿ ಮತ್ತು ಜೀವನ ಶೈಲಿಯಿಂದ ವಯಸ್ಸಿನ ಮಿತಿ ಇಲ್ಲದೆ ಅನಾರೋಗ್ಯಕ್ಕೆ ಗುರಿಯಾಗುತ್ತಿದ್ದಾರೆ. ಇದನ್ನು ಹೋಗಲಾಡಿಸಲು ಶುದ್ದ ಆಹಾರ ಮತ್ತು ನೀರು ಸೇವಿಸಬೇಕು. ದುಶ್ಚಟಗಳಿಂದ ದೂರವಿರಬೇಕು ಎಂದು ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಎನ್. ಶ್ರೀರಾಮರೆಡ್ಡಿ ತಿಳಿಸಿದರು.
ತಾಲೂಕಿನ ಆಲವಟ್ಟ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ವೈದೇಹಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರರವರು ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉಧ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಭಾಗಗಳಲ್ಲಿ ಆರ್ಥಿಕ ಮೂಲಗಳು ಕಡಿಮೆ ಇರುವುದರಿಂದ ರೈತರಿಗೆ ಆರೋಗ್ಯ ಕೆಟ್ಟರೂ ಆಸ್ಪತ್ರೆಗಳಿಗೆ ಹೋಗಲು ಹಿಂಜರಿಯುತ್ತಾರೆ. ಅದನ್ನು ಮನಗಂಡು ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ ಈ ಶಿಬಿರದಲ್ಲಿ ಕ್ಯಾನ್ಸರ್, ಹೃದಯ ಖಾಯಿಲೆ, ನರ ಸಂಬಂಧ ಖಾಯಿಲೆ, ಮೂಲೆ ಸಂಬAಧಿಸಿದ ಖಾಯಿಲೆ ಹಾಗೂ ಕಿಡ್ನಿಗಳಿಗೆ ಸಂಬಂದಿಸಿದ ಖಾಯಿಲೆಗಳಿಗೂ ತಪಾಸಣೆ ಮಾಡಿ ಅಗತ್ಯವಿದ್ದರೆ ಶಸ್ತ್ರ ಚಿಕಿತ್ಸೆಯೂ ಸಹ ಮಾಡಲು ವೈದೇಹಿ ಅಸ್ಪತ್ರೆಯವರು ಮುಂದಾಗಿರುವುದು ಶ್ಲಾಘನೀಯ ಇದರ ಉಪಯೋಗವನ್ನು ಪಡೆದುಕೊಳ್ಳಿ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಟಿ. ನಾರಾಯಣಸ್ವಾಮಿ, ಮಾಜಿ ಸದಸ್ಯ ವಿ. ವೆಂಕಟರೆಡ್ಡಿ, ಪ್ರಥಮ ದರ್ಜೆ ಗುತ್ತಿಗೆದಾರ ಎ.ಎಸ್. ಮಂಜುನಾಥರೆಡ್ಡಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚೌಡರೆಡ್ಡಿ, ಸದಸ್ಯ ಕೆ. ನಾರಾಯಣಸ್ವಾಮಿ, ಆಲವಾಟ ಗ್ರಾಮದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|| ಮಂಜುನಾಥ್, ಡಾ|| ಅರವಿಂದ್, ಡಾ|| ದರ್ಶನ್, ಪಿ.ಆರ್.ಓ ಹರೀಶ್ ಕುಮಾರ್ ಇದ್ದರು.
