ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೆಅರ್ ಎಸ್ ಪಕ್ಷ ಈಬಾರಿಯ ಚುನಾವಣೆಯಲ್ಲಿ ಖಾತೆ ತೆರಯಲಿದೆ ಎಂದು ಕೆಅರ್ ಎಸ್ ನ ರಾಜ್ಜ್ಯಾಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ , ಬಿಜೆಪಿ ಹಾಗೂ ಜೆಡಿಎಸ್ ಚುನಾವಣಾ ಅಕ್ರಮ ಹಾಗೂ ಕರ್ತವ್ಯ ಲೋಪದಲ್ಲಿ ತೊಡಗಿಕೊಂಡಿದೆ. ಸರಳ ಸಜ್ಜನಿಕೆಯ , ಅರೋಗ್ಯ ಯುತ ಹಾಗೂ ಸ್ವಚ್ಛ ರಾಜಕಾರಣ ಅಗತ್ಯ ವಿದೆ ಎಂದರು. ರಾಜ್ಯ ಉಪಾಧ್ಯಕ್ಷ ಅಮೃತ ಶೆಣೈ ಮಾತನಾಡಿ, ಭ್ರಷ್ಟಚಾರ ವಿರುದ್ದ ಹಾಗೂ ಸ್ವಚ್ಚ ಸಂವಿಧಾನ ರೂಪಿಸಲು ಕರ್ನಾಟಕ ರಾಷ್ಟ ಸಮಿತಿ ಹುಟ್ಟಿಕೊಂಡಿದೆ. ರಾಜ್ಯದ ಅಕ್ರಮಗಳ ವಿರುದ್ದ ಪಕ್ಷ ಹೋರಾಟ ನಡೆಸಲಿದೆ. ಅಭಿವೃದ್ದಿಯಲ್ಲಿ ಭ್ರಷ್ಟಾಚಾರ ಇರಬಾರದು ಸಮಾಜ ಕುಲಗೆಟ್ಟಿದೆ. ಕೆಅರ್ ಎಸ್ ಪಕ್ಷ ಸಮಾಜವನ್ನು ಸ್ವಚ್ಚವಾಗಿಡಲು ಪಕ್ಷ ಶ್ರಮಿಸಲಿದೆ ಎಂದರು.
ದೇಶದ ವಾತಾವರಣ ನಿರಾಶದಾಯಕವಾಗಿದೆ ಉದ್ಯೋಗವೇ ಇಲ್ಲ, ರಸ್ತೆ ಸರಿ ಇಲ್ಲ. ಮಂಗಳೂರು ಕೂಡಾ ಇದಕ್ಕೆ ಹೊರತಲ್ಲ. ಯಾರ್ಯಾರನ್ನು ದೂಷಿಸಿ ಪ್ರಯೋಜನ ಇಲ್ಲ. ಸರಿಯಾದ ಆಡಳಿತ ವಿದ್ದರೆ ಭ್ರಷ್ಟಾಚಾರ ಇರಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ, ಜೆಡಿಎಸ್ ಟೋಪಿ ಇಟ್ಟಿದೆ. ಜಾತಿ ಕೇಳಿ ಟಿಕೆಟು ಕೊಡಲಾಗುತ್ತದೆ. ಇದರಿಂದ ರಾಜಕೀಯ ಹೊಲಸಾಗಿದೆ. ಪ್ರಾಮಾಣಿಕರಿಗೆ ಅವಕಾಶ ಸಿಗಬೇಕು. ಪ್ರಾಮಾಣಿಕರಿಗೆ ಅವಕಾಶ ಸಿಕ್ಕರೆ ದಕ್ಷ ಆಡಳಿತ ಸಾಧ್ಯವಿದೆ. ಬದಲಾವಣೆ ಕೆಅರ್ ಎಸ್ ನಿಂದ ಸಾಧ್ಯ ಎಂದರು. ದ.ಕ.ಜಿಲ್ಲಾಧ್ಯಕ್ಷ ಅಲೆಕ್ಸಾಂಡರ್ ಡಿಸಿಲ್ವ, ಸಾಮಾಜಿಕ ಕಾರ್ಯಕರ್ತರಾದ ಜಯಶ್ರೀ, ಭಟ್ ಇದ್ದರು.


