ಕೋಲಾರ: ಸ್ಥಳೀಯ ಸಂಸ್ಥೆಗಳು ಮತ್ತು ವಿಧಾನಸಭಾ ಉಪಚುನಾವಣೆಗೆ ಮತ್ತೆ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ ಸ್ವಷ್ಟಪಡಿಸಿದರು.24kolar3

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದೇನೆ ಎಂಬ ವಿಷಯದಲ್ಲಿ ಮುಚ್ಚುಮರೆ ಏನಿಲ್ಲ, ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ನನ್ನನ್ನು ಸೋಲಿಸಿದವರಿಗೆ ಸೋಲಿನ ರುಚಿ ತೋರಿಸಲೇಬೇಕಾಗಿತ್ತು, ಅದಕ್ಕಾಗಿ ಹೆಚ್ಚಿನ ಮುತುವರ್ಜಿ ವಹಿಸಿಯೇ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದೇನೆ ಎಂದು ತಿಳಿಸಿದರು.
ರಾಜಕಾರಣ ಹರಿಯುವ ನೀರು ಇದ್ದಂತೆ ನಾನು 4 ಬಾರಿ ನಾಲ್ಕು ಪಕ್ಷಗಳಿಂದ ಗೆದ್ದು ಶಾಸಕನಾಗಿದ್ದೇನೆ, ಈಗ ನಗರಸಭೆ ಚುನಾವಣೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅಥವಾ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಸೂಚಿಸಿದರೆ ಹೊಂದಾಣಿಕೆಗೆ ಸಿದ್ದ ಎಂದರು.

 

By suddi9

Leave a Reply

Your email address will not be published. Required fields are marked *