ಕೋಲಾರ: ಕೃಷಿ ಮತ್ತು ಹೈನೋದ್ಯಮಕ್ಕೆ ಮಾರಾಕವಾಗಿರುವ ಆರ್.ಸಿ.ಇ.ಪಿ (ಮುಕ್ತ ಮಾರುಕಟ್ಟೆ ) ಒಪ್ಪಂದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದೆಂದು ಕೇಂದ್ರ ಸರ್ಕಾರದ ಕಣ್ಣು ತೆರೆಸಲು ರೈತ ಸಂಘದಿಂದ ದಿನಾಂಕ 24-10-2019ರಂದು ಹಸುಗಳ ಸಮೇತ ಕೊಂಡರಾಜನಹಳ್ಳಿಯ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.ಸಭೆಯಲ್ಲಿ ಮಾತನಾಡಿದ ರೈತ ಸಂಘ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಕೃಷಿ ಪ್ರಧಾನವಾದ ದೇಶದಲ್ಲಿ ಕೃಷಿಯೇ ರೈತನ ಮೂಲ ಕಸಬು ಕೋಟ್ಯಾಂತರ ಕುಟುಂಬಗಳು ಇಂದು ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿ ಜೀವನ ನಿರ್ವಹಣೆ ಮಾಡುತ್ತಿವೆ. ಒಂದು ಕಡೆ ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಕಂಪನಿಗಳಿಗೆ ಅಡ ಇಟ್ಟು, ಕೃಷಿಯನ್ನು ಶ್ರೀಮಂತ ಮಾಡಿ ರೈತರನ್ನು ಕೃಷಿಯಿಂದ ವಿಮುಕ್ತಿ ಹೊಂದಿಸಿ, ಕೃಷಿ ಜಮೀನನ್ನು ಅಭಿವೃದ್ಧಿ ನೆಪದಲ್ಲಿ ವಶಪಡಿಸಿಕೊಂಡು ಮತ್ತಷ್ಟು ರೈತರ ಮರಣ ಶಾಸನ ಬರೆಯುವ ಸರ್ಕಾರಗಳಿಗೆ ಸವಾಲಾಕಿ ತನ್ನ ಸ್ವಾಭಿಮಾನ ಜೀವನಕ್ಕಾಗಿ ಹೈನೋದ್ಯಮವನ್ನು ನಂಬಿ ಜೀವನ ಮಾಡುತ್ತಿದ್ದ ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರದ 1991 ರ ಗ್ಯಾಟ್ ಒಪ್ಪಂದ ಎಂಬ ಜಾಗತಿಕ ಮುಕ್ತ ಮಾರುಕಟ್ಟೆಗೆ ಅವಕಾಶ ನೀಡಿ ಇಂದಿಗೂ ಸಹ ಕೃಷಿ ಕ್ಷೇತ್ರ ಚೇತರಿಸಿಕೊಳ್ಳುತ್ತಿಲ್ಲ. ಆದರೆ ಇಂದು ಆರ್,ಸಿ,ಇ,ಪಿ (ಪ್ರಾದೇಶಿಕ ಸಮಗ್ರ ಆರ್ಥಿಕ ಸಹಬಾಗಿತ್ವ)ಈ ಒಪ್ಪಂದಕ್ಕೆ ಸಹಿ ಹಾಕಿದ್ದಲ್ಲಿ 156 ಮಿಲಿಯನ್ ಹಾಲು ಉತ್ಪಾದಕರು ಇಂದು ಬೀದಿಗೆ ಬರುತ್ತಿದ್ದಾರೆ ಆದ್ದರಿಂದ ದಿನಾಂಕ 24-10-2019ರಂದು ರಾಷ್ಟ್ರಾದ್ಯಾಂತ ರೈತ ಚಳುವಳಿಗಳಿಂದ ಪ್ರತಿಭಟನೆಗೆ ಕರೆ ನೀಡಿದ್ದಾರೆಂದರು
ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ ರೈತನೇ ದೇಶದ ಬೆನ್ನೆಲಬು ಎಂದು ರೈತರ ಮೇಲೆ ಪ್ರಮಾಣ ಮಾಡುವ ಸರ್ಕಾರಗಳು ದಿನೇ ದಿನೇ ರೈತರನ್ನು ಒಂದಲ್ಲಾ ಒಂದು ನೀತಿಯನ್ನು ಜಾರಿ ತಂದು ಸಂಪೂರ್ಣವಾಗಿ ರೈತ ಕುಲವನ್ನೇ ಸರ್ವನಾಶ ಮಾಡಿ ಇಡೀ ದೇಶವನ್ನೇ ಆಹಾರ ಭದ್ರತೆಗಾಗಿ ಹೊರದೇಶಗಳ ಬಳಿ ಕೈಚಾಚಬೇಕಾದ ಪರಿಸ್ಥಿತಿ ತಂದಿವೆ. ಅದರಲ್ಲೂ ಪ್ರಮುಖವಾಗಿ ಕರ್ನಾಟಕ ರಾಜ್ಯದಲ್ಲಿ ಹೈನೋದ್ಯಮ ಪ್ರಥಮ ಸ್ಥಾನದಲ್ಲಿ ಅದರಲ್ಲೂ ಬಯಲು ಸೀಮೆಯ ಕೋಲಾರ ಚಿಕ್ಕಬಳ್ಳಾಪುರ ಇಡೀ ದೇಶಕ್ಕೆ ಹಾಲು ಉತ್ಪನ್ನಗಳನ್ನು ರಪ್ತು ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿವೆ. ಇಂದು ಯಾವುದೇ ನದಿನಾಳೆಗಳಿಲ್ಲದ ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು ಉಸಿರಾಡುತ್ತಿದ್ದಾರೆಂದರೆ ಅದಕ್ಕೆ ಮೂಲ ಕಾರಣ ಹೈನೋದ್ಯಮ ಅದು ಅಲ್ಲದೆ ಇಡೀ ಭಾರತ ದೇಶಕ್ಕೆ ಹೈನು ಹಾಲು ಪರಿಚಯ ಮಾಡಿಕೊಟ್ಟ ಕ್ಷಿರ ಬ್ರಹ್ಮ ಎಂದು ಹೆಸರು ಪಡೆದಿರುವ ಎಂ.ವಿ.ಕೃಷ್ಣಪ್ಪನವರ ಹುಟ್ಟಿದ ನಾಡು ನಮ್ಮ ಕೋಲಾರ ಜಿಲ್ಲೆ ಆದರೆ ಹೈನೋದ್ಯಮದ ಜೀವನಾಡೆಯಾಗಿರುವ ಕೊಟ್ಯಾಂತರ ಕುಟುಂಬಗಳ ಬದುಕನ್ನು ಕಸಿದುಕೊಳ್ಳಲು ಹೊರಟಿರುವ ಕೇಂದ್ರ ಸರ್ಕಾರದ ಮುಕ್ತ ಮಾರುಕಟ್ಟೆ ಆರ್.ಸಿ.ಇ.ಪಿ ಒಪ್ಪಂದಕ್ಕೆ ಕ್ಷಣಗಣನೆ ಆರಂಭ ಮಾಡುತ್ತಿರುವುದು ರೈತರ ಮರಣ ಶಾಸನದ ಒಪ್ಪಂದವಾಗಿದೆ. ಯಾವುದೇ ಕಾರಣಕ್ಕೂ ಈ ಒಪ್ಪಂದಕ್ಕೆ ಸಹಿ ಹಾಕಬಾರದೆಂದು ದಿನಾಂಕ 24-10-2019ರ ಗುರುವಾರ ಹಸುಗಳ ಸಮೇತ ಕೊಂಡರಾಜನಹಳ್ಳಿಯ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.
ಈ ಸಭೆಯಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿ, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಬಂಗವಾದಿ ನಾಗರಾಜಗೌಡ, ಕೋ.ತಾ.ಅ ಈಕಂಬಳ್ಳಿ ಮಂಜುನಾಥ್, ಹುಲ್ಕೂರ್ ಹರಿಕುಮಾರ್, ಕ್ಯಾಸಂಬಳ್ಳಿ ಪ್ರತಾಪ್, ವಡ್ಡಹಳ್ಳಿ ಮಂಜುನಾಥ್À, ತೆರ್ನಹಳ್ಳಿ ಆಂಜಿನಪ್ಪ, ಮಾಲುರು ತಾಲ್ಲೂಕು ಅಧ್ಯಕ್ಷ ಹೊಸಹಳ್ಳಿ ವೆಂಕಟೇಶ್.ಐತಂಡಹಳ್ಳಿ ಅಂಬರೀಶ್, ಉದಯ್, ಮಂಜುನಾಥ್, ಮೀಸೆ ವೆಂಕಟೇಶಪ್ಪ, ತೆರ್ನಹಳ್ಳಿ ವೆಂಕಿ, ಸಹದೇವಣ್ಣ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಪ್ರಸನ್ನಕುಮಾರ್, ಸಂತೋಷ್, ಪುರುಶೋತ್ತಮ್, ಹರೀಶ್, ಯಲ್ಲಪ್ಪ, ಮಣಿ, ನಿರಂಜನ್, ಮುಂತಾದವರಿದ್ದರು.
