ವಿಟ್ಲ  : ಸಂಘಟನೆಯ ಹೋರಾಟ ನ್ಯಾಯದ ಪರವಾಗಿರಬೇಕೆ ಹೊರತು ಅನ್ಯಾಯದ ಪರವಾಗಿರಬಾರದು. ಕೆಲವರ ಸ್ವಾರ್ಥಕ್ಕೋಸ್ಕರ ಅನ್ಯಾಯದ ಪರವಾಗಿ ಹೋರಾಡಿದ ಪರಿಣಾಮವಾಗಿ ನ್ಯಾಯದ ಪರವಿದ್ದ ನಮ್ಮ ಸಂಘಟನೆಯ ಸದಸ್ಯರು ಇವತ್ತು ಕಷ್ಟ ಅನುಭವಿಸಬಾಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ’ ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ದ ಕ ಜಿಲ್ಲಾ ಸಮಿತಿ ಮಂಗಳೂರು ಇದರ ಅಧ್ಯಕ್ಷ ಪಿ ಶಿವಕುಮಾರ್ ಪೈಲೂರು ಹೇಳಿದರು.

SHV_3409

ಅವರು ವಿಟ್ಲದ ಜೆ ಎಲ್ ಆಡಿಟೋರಿಯಮ್‍ನಲ್ಲಿ ನಡೆದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ದ ಕ ಜಿಲ್ಲಾ ಸಮಿತಿ ಮಂಗಳೂರು ಇದರ ವಿಟ್ಲ ಉಪಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ಕುಶಲ ಪೂಜಾರಿ, ಖಜಾಂಚಿ ಚೇತನ್ ಮಲ್ಯ, ಉಪಾಧ್ಯಕ್ಷ ರವಿ ಸುವರ್ಣ, ಸಂಘಟನಾ ಕಾರ್ಯದರ್ಶಿ ಲ್ಯಾನ್ಸಿ ಫೆರ್ನಾಂಡಿಸ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯ ಬಾಲಕೃಷ್ಣ ಸೆರ್ಕಳ ಅತಿಥಿಗಳಾಗಿ ಭಾಗವಹಿಸಿದ್ದರು. ವಿಟ್ಲ ಉಪಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಅಡ್ಯಂತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ತುಳಸೀದಾಸ್ ಶೆಣೈ ಪ್ರಾರ್ಥಿಸಿದರು. ಕಾರ್ಯದರ್ಶಿ ಕೇಶವ ವರದಿ ವಾಚಿಸಿದರು. ಕೋಶಾಧಿಕಾರಿ ಲೆಕ್ಕಪತ್ರ ಮಂಡಿಸಿ ವಂದಿಸಿದರು. ಪುಣಚ ಜಾಯ್ ಎಲೆಕ್ಟ್ರಿಕಲ್ಸ್ ನ ಅಶಿನ್ ನಿರೂಪಿಸಿದರು. ಸಮಿತಿಯ ಉಪಾಧ್ಯಕ್ಷ ಕೆ ಕೃಷ್ಣ ಬನಾರಿ, ಜತೆಕಾರ್ಯದರ್ಶಿ ಮಹಮ್ಮದ್ ಬೈರಿಕಟ್ಟೆ, ಸಂಘಟನಾ ಕಾರ್ಯದರ್ಶಿ ಪಿ ಜೆ ಜಾನ್ಸನ್ ವೇದಿಕೆಯಲ್ಲಿದ್ದರು. ಸಮಿತಿ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *