ಕೋಲಾರ :  ಸಂಘದಲ್ಲಿ ಸಾಲ ಮಾಡಿದ ಸದಸ್ಯರ 10 ಲಕ್ಷ ರೂ ಬಡ್ಡಿಯನ್ನು ಮನ್ನಾ ಮಾಡಿದ್ದರೂ ಈ ವರ್ಷ 1.57 ಲಕ್ಷ ಲಾಭ ಗಳಿಸಿದೆ ಎಂದು ತಾಲ್ಲೂಕಿನ ಕ್ಯಾಲನೂರು ನೂಲುಬಿಚ್ಚುವವರ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಷೇಕ್ ಮಹಮದ್ ಅಲಿಯಾಸ್ ಬಾಬಾ ತಿಳಿಸಿದರು. ಗ್ರಾಮದಲ್ಲಿ ಸೊಮವಾರ ನಡೆದ ನೂಲು ಬಿಚ್ಚಾಣಿಕೆ ಕೈಗಾರಿಕೆಗಳ ಸಹಕಾರ ಸಂಘದ ವಾರ್ಷಿಕ ಸರ್ವಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕ್ಯಾಲನೂರು ರೇಷ್ಮೆ ನೂಲು ಬಿಚ್ಚುವವರ ಕೈಗಾರಿಕಾ ಸಂಘದ 46ನೇ ವರ್ಷದ ಸರ್ವಸದಸ್ಯರ ಸಭೆ ನಡೆಸುತ್ತಿದ್ದು, ನೂಲು ಬಿಚ್ಚಾಣಿಕೆದಾರರಿಂದ ನೂಲನ್ನು ಒತ್ತೆಯಿಟ್ಟು ಕಡಿಮೆ ಬಡ್ಡಿಗೆ ಸಾಲ ನೀಡುವ ಮೂಲಕ ಅವರ ಆರ್ಥಿಕ ಪ್ರಗತಿಗೆ ನೆರವು ನೀಡುತ್ತಾ ಬಂದಿದೆ ಎಂದು ತಿಳಿಸಿದರು.

ಈ ವರ್ಷದ ಸಂಘದ ನಿವ್ಹಾಳ ಲಾಭ 1.57 ಲಕ್ಷಗಳಾಗಿದ್ದು, ರಾಜ್ಯದಲ್ಲೆ ಮೊದಲನೇ ಸ್ಥಾನದಲ್ಲಿದ್ದು ಮತ್ತು ಈ ವರ್ಷದಲ್ಲಿ ಸಂಘದ ವತಿಯಿಂದ ನೂಲು ಬಿಚ್ಚುವವರಿಗೆ ಕಡಿಮೆ ಬಡ್ಡಿ ದರದಲ್ಲಿ ರೇಷ್ಮೆ ಒತ್ತೆಸಾಲ ವಿತರಣೆಗೆ ಹೆಚ್ಚಿನ ಒತ್ತುನೀಡುವುದಾಗಿ ತಿಳಿಸಿದರು. ಸಂಘದ ವತಿಯಿಂದ ರೇಷ್ಮೆ ನೂಲು ಬಿಚ್ಚುವವರಿಗೆ ಅಗತ್ಯವಾದ ಗುಣಮಟ್ಟದ ನೀರು ಸರಬರಾಜು ಮಾಡುವುದು ಹಾಗೂ ಸರ್ಕಾರದ ವತಿಯಿಂದ ರೀಲರುಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಕೋಡಿಸುವುದರ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಕುರಿತು ಸದಸ್ಯರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿರುವುದಾಗಿ ನುಡಿದರು. ಹಲವಾರು ವರ್ಷಗಳ ಹಿಂದೆ ಕೆಎಸ್‍ಎಫ್‍ಸಿಯಿಂದ ಸಾಲವನ್ನು ರೇಷ್ಮ ನೂಲು ಬಿಚ್ಚುವವರು ಹಾಗೂ ಹುರಿ ಮಾಡುವವಿಗೆ ಕೊಡಿಸಲಾಗಿತ್ತು. ಆದರೆ ರೇಷ್ಮೆ ದರ ಕುಸಿತದಿಂದ ಸಾಲ ಮಾರುಪಾವತಿ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದರು.

24kolar5
ಈ ಹಿನ್ನಲೆಯಲ್ಲಿ ಮುಖಂಡ ಸಿರಾಜ್ ಸಾಬ್, ದಾದಾ ಸಾಬ್, ಬಾಬಾ ಸಾಬ್ ನವರು ಹಿಂದೆ ಸಚಿವರಾಗಿದ್ದ ದಿವಂಗತ ಬೈರೇಗೌಡರ ನೇತೃತ್ವದಲ್ಲಿ ಜೆ.ಎಚ್ ಪಟೇಲ್‍ರ ಸರ್ಕಾರದಲ್ಲಿ ಸಂಪೂರ್ಣ ಬಡ್ಡಿಮನ್ನ ಮಾಡಿ ರಾಜ್ಯದ ರೀಲರುಗಲಿಗೆ ಅನುಕೂಲ ಮಾಡಿಕೊಟ್ಟಿದ್ದರು ಎಂದು ಸ್ಮರಿಸಿದರು. ಬೈರೇಗೌಡರ ಕಾಲದಲ್ಲಿ ಸಂಘದ ಮೂಲಕ 200 ಸದಸ್ಯರುಗಳಿಗೆ ಕರ್ನಾಟಕ ಅಲ್ಪಸಂಖ್ಯಾತರ ನಿಗಮದಿಂದ ತಲಾ 36500 ರೂಗಳ ಸಾಲವನ್ನು ನೀಡಲಾಗಿತ್ತು ಆದರೆ ಬಡ್ಡಿ ಮನ್ನಮಾಡಿದ್ದರಿಂದಾಗಿ ಶೇ. 80 ಸದಸ್ಯರುಗಳು ಮರುಪಾವತಿ ಮಾಡಿ ಸಾಲ ತೀರಿಸಿದರು ಎಂದರು. ಇತ್ತೀಚೆಗೆ ರಾಜ್ಯದ ಮಾಜಿ ಮುಖ್ಯಮಂತ್ರಿಗಾಳದ ಸಿದ್ದರಾಮಯ್ಯನವರು ಸರ್ಕಾರದಿಂದಲೂ ಸಾಲ ಮನ್ನಾ ಸೌಲಭ್ಯ ಸಿಕ್ಕಿತು ಎಂದ ಅವರು, ಮಾಜಿ ಸಂಸದ ಕೆ ಎಚ್ ಮುನಿಯಪ್ಪನವರ ಶಿಫಾರಸ್ಸಿನಂತೆ ಸುಮಾರು 900 ಸದಸ್ಯರಿಒಗೆ ಕೆನರಾ ಬ್ಯಾಂಕಿನಿಂದ 50 ಸಾವಿರದಿಂದ 2 ಲಕ್ಷದವರೆಗೂ ಸಾಲ ಸೌಲಭ್ಯ ವಿವಿಧ ಯೋಜನೆಗಳಡಿ ಸಿಕ್ಕಿತು ಎಂದರು. ಅದೇ ರೀತಿ ಕೃಷ್ಣಭೈರೇಗೌಡರ ಮುಂಖಾತರ ಕ್ಯಾಲನೂರು ಹಾಗೂ ಚನ್ನಸಂದ್ರ ಗ್ರಾಮಗಳಿಗೆ 24 ಘಂಟೆಯ 3 ಪೇಸ್ ವಿಧ್ಯುತ್ ಸರಬರಾಜು ಮಾಡಕೋಟ್ಟಿರುತ್ತಾರೆ. ಇನ್ಮುಂದೆ ಸಂಘದವತಿಯಿಂದ ರೇಷ್ಮೆ ಇಲಾಖೆಯಿಂದ ಡಿಸಿಸಿ ಬ್ಯಾಂಕ್ ಮುಖಾಂತರ ಸದಸ್ಯರುಗಳಿಗೆ ಮೂರು ಲಕ್ಷ ನೀಡಲು ನಿರ್ಧರಿಸಿದ್ದು, ನಾವು ಐದು ಲಕ್ಷ ನೀಡಲು ಮಾನವಿಮಾಡಿರುತ್ತೆವೆ ಎಂದರು.

ಸಂಘದ ಉಪಧ್ಯಕ್ಷ ಸಿ.ಎಂ ಲಕ್ಷೀನಾರಾಯಣ ಮಾತನಾಡಿ, ಶೇಕ್ ಮಹಮದ್ ಅಧ್ಯಕ್ಷತೆಯಲ್ಲಿ ರೀಲರುಗಳ ಅನೇಕ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ, ರೀಲರುಗಲಿಗೆ ತೊಂದರೆಯಾದರೆ ಅವರ ಬಳಿ ಹೋಗಿ ಸಮಸ್ಯೆ ಅರಿತು ಪರಿಹರಿಸುವ ಕಾರ್ಯ ಮಾಡುತ್ತೇವೆ ಎಂದರು. ಸಭೆಯಲ್ಲಿ ಸಂಘದ ನಿರ್ದೇಶಕರಾದ ನಜೀರ್ ಖಾನ್, ಎ.ಉಸ್ಮಾನ್ ಸಾಬ್, ಕೇ ಷಪೀಉಲ್ಲಾ, ಜಂಷೀರ್ ಪಾಷಾ, ಇನಾಯತ್ ಉಲ್ಲಾ ಷರೀಫ್, ನಯಾಜುದ್ದೀನ್, ಮುನಿಗಂಗಪ್ಪ ಮತ್ತು ಊರಿನ ಮುಖಂಡರು, ಸಂಘದ ಸದಸ್ಯರುಗಳು ಹಾಜರಿದ್ದರು. ಕೋಲಾರ ತಾಲ್ಲೂಕು ಕ್ಯಾಲನೂರು ನೂಲುಬಿಚ್ಚುವವರ ಕೈಗಾರಿಕಾ ವಾರ್ಷಿಕ ಸರ್ವಸದಸ್ಯರ ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಷೇಕ್ ಮಹಮದ್ ಅಲಿಯಾಸ್ ಬಾಬಾ ವಹಿಸಿದ್ದರು.

By suddi9

Leave a Reply

Your email address will not be published. Required fields are marked *