ಉಡುಪಿ: ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ದರನ್ನು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿ ಬ್ರಹ್ಮಾವರ ‘ಅಪ್ಪ-ಅಮ್ಮ’ ಅನಾಥಾಲಯದಲ್ಲಿ ಸುರಕ್ಷಿತ ನೆಲೆ ಕಲ್ಪಿಸಿದ್ದಾರೆ. ಆಶ್ರಮ ಸಂಚಾಲಕ ಪ್ರಶಾಂತ ಪೂಜಾರಿ ಕೂರಾಡಿ ಅವರು, ವೃದ್ಧರಿಗೆ ಆಶ್ರಯ ಒದಗಿಸಿ ಮಾನವಿಯತೆ ಮೆರೆದಿದ್ದಾರೆ. ಮಾನಸಿಕವಾಗಿ ನೊಂದಿರುವ ವೃದ್ಧರು ಚಂದ್ರಶೇಖರ ಭಟ್ (70 ವ) ಸಾಗರ ಬಿ.ಎಚ್ ರಸ್ತೆ ಇಲ್ಲಿಯ ನಿವಾಸಿಯೆಂದು ಹೇಳಿಕೊಂಡಿದ್ದಾರೆ.
ಕಾರ್ಯಚರಣೆಯಲ್ಲಿ ಡಾ.ಜಿ.ಎಮ್.ಕಂಠಿ, ಹಿರಿಯ ನಾಗರಿಕ ಸಹಾಯವಾಣಿ ಸಿಬ್ಭಂದಿ ಗಣೇಶ್ ನಾಯ್ಕ್, ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಹಾಗೂ ಸುಧಾಕರ ಆಚಾರ್ಯ ಮಣಿಪಾಲ ಪಾಲ್ಗೊಂಡಿದ್ದರು.
