ಶ್ರೀನಿವಾಸಪುರ: ಮಾನವನಿಗೆಕಣ್ಣುದೃಷ್ಟಿ ಬಹಳ ಮುಖ್ಯವಾಗಿದ್ದು, ಸುಮಾರು 45-50 ವರ್ಷಗಳಾಗುವಷ್ಟರಲ್ಲಿ ಕಣ್ಣನ್ನು ಆಗಾಗ ತಪಾಸಣೆಗೊಳಿಸುವುದು ಬಹಳ ಮುಖ್ಯವಾಗಿದ್ದು, ಇಂತಹಉಚಿತ ಕಣ್ಣಿನ ತಪಾಸಣಾ ಶಿಭಿರದ ಪ್ರಯೋಜನವನ್ನುತಾಲ್ಲೂಕಿನಜನತೆ ಉಪಯೋಗಿಸಿಕೊಳ್ಳಬೇಕೆಂದು ರೋಟರಿಶ್ರೀನಿವಾಸಪುರ ಸೆಂಟ್ರಲ್ ನ ಅಧ್ಯಕ್ಷರಾದಆರ್.ವಿ. ಕುಲಕರ್ಣಿ ತಿಳಿಸಿದರು. ಪಟ್ಟಣದಎಂ.ಜಿ. ರಸ್ತೆಯಲ್ಲಿರುವ ಎಲ್.ಐ.ಸಿ. ಉಪಗ್ರಹ ಶಾಖೆಯಲ್ಲಿ, ರೋಟರಿ ಶ್ರೀನಿವಾಸಪುರ ಸೆಂಟ್ರಲ್, ಎಲ್.ಐ.ಸಿ. ಉಪಗ್ರಹ ಶಾಖೆ ಮತ್ತು ಜಿ.ಇ.ಎಫ್.ನೇತ್ರದೀಪ ಕಣ್ಣಿನ ಆಸ್ಪತ್ರೆ, ಕೋಲಾರಇವರ ಸಹಯೋಗದೊಂದಿಗೆಉಚಿತಕಣ್ಣಿನತಪಾಸಣಾ ಶಿಭಿರವನ್ನು ಏರ್ಪಡಿಸಿ ಮಾತನಾಡಿದಕುಲಕರ್ಣಿ, ಕಣ್ಣುದೃಷ್ಟಿ ಬಹಳ ಮುಖ್ಯವಾಗಿದ್ದು, ನಾವೆಲ್ಲರೂ ಹಸಿರು ತರಕಾರಿಯನ್ನುಉಪಯೋಗಿಸುವುದುಕಡಿಮೆಯಾಗಿರುವುದರಿಂದ 45-50 ವರ್ಷಕ್ಕೆ ನಮಗೆಲ್ಲಾಕಣ್ಣಿನದೃಷ್ಟಿ ಸಮಸ್ಯೆಯಾಗುತ್ತಿದ್ದು, ಆಗಾಗ ಕಣ್ಣಿನತಪಾಸಣೆಯನ್ನು ಮಾಡಿಸಿಕೊಳ್ಳುವುದು ಒಳ್ಳೆಯದು. ತಾಲ್ಲೂಕಿನ ಸಾರ್ವಜನಿಕರುಇಂತಹಉಚಿತ ಶಿಭಿರದಲ್ಲಿ ಕಣ್ಣಿನತಪಾಸಣೆಯನ್ನು ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.eye camp 1

ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಕಾರ್ಯದರ್ಶಿ ಎನ್.ಕೃಷ್ಣಮೂರ್ತಿ ಮಾತನಾಡಿ, ಭಾರತೀಯಜೀವ ವಿಮಾ ನಿಗಮದ ಹುಟ್ಟು ಹಬ್ಬದ ಪ್ರಯುಕ್ತಎಲ್.ಐ.ಸಿ., ಶ್ರೀನಿವಾಸಪುರ ಶಾಖೆ, ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಮತ್ತುಜಿ.ಇ.ಎಫ್.ನೇತ್ರದೀಪಕಣ್ಣಿನಆಸ್ಪತ್ರೆ, ಕೋಲಾರಇವರ ಸಂಯುಕ್ತಆಶ್ರಯದಲ್ಲಿಉಚಿತಕಣ್ಣಿನತಪಾಸಣಾ ಶಿಭಿರವನ್ನು ಹಮ್ಮಿಕೊಂಡಿದ್ದು, ಈ ಶಿಭಿರದಲ್ಲಿ ಬೆಳಿಗಿನಿಂದ ಸುಮಾರು85ಪುರಶ ಮತ್ತು ಮಹಿಳೆಯರಿಗೆ ಕಣ್ಣಿನತಪಾಸಣೆಯನ್ನು ಮಾಡಿದ್ದು, ಇವರಲ್ಲಿ ಸುಮಾರು 50-55 ಜನರಿಗೆಕಣ್ಣಿನಲ್ಲಿ ಪೆÇರೆಇನ್ನಿತರೆ ತೊಂದರೆಗಳಿದ್ದು, ಇವರಿಗೆ ಶಸ್ತ್ರಚಿಕಿತ್ಸೆಅವಶ್ಯಕತೆಯಿದ್ದು, ಶಸ್ತ್ರಚಿಕಿತ್ಸೆಗಾಗಿಕೋಲಾರದಜಿ.ಇ.ಎಫ್.ನೇತ್ರದೀಪಕಣ್ಣಿನಆಸ್ಪತ್ರೆಯಲ್ಲಿಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುವುದು. ಇವರಿಗೆ ಶಸ್ತ್ರಚಿಕಿತ್ಸೆಯ ನಂತರಒಂದು ತಿಂಗಳ ಕಾಲ ಚಿಕಿತ್ಸೆಯೊಂದಿಗೆಉಚಿತವಾಗಿಔಷದಿಯನ್ನು ನೀಡಲಾಗುವುದುಎಂದರು.

ಶಾಖಾ ವ್ಯವಸ್ಥಾಪಕರಾದ ಸತೀಶ್‍ಮಾತನಾಡಿ, ಭಾರತೀಯಜೀವ ವಿಮಾ ನಿಗಮದ ಹುಟ್ಟುಹಬ್ಬದ ಪ್ರಯುಕ್ತ ಶಾಖೆಯಲ್ಲಿ ಪ್ರತಿ ವರ್ಷವೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಾರಿಉಚಿತ ನೇತ್ರತಪಾಸಣಾ ಶಿಭಿರವನ್ನು ಹಮ್ಮಿಕೊಂಡಿದ್ದು, ಈ ಶಿಭಿರದಲ್ಲಿ ಸುಮಾರು85 ಮಂದಿ ಕಣ್ಣಿನತಪಾಸಣೆಯನ್ನು ಮಾಡಿಸಿಕೊಂಡಿದ್ದು, ಹೆಚ್ಚಿನಚಿಕಿತ್ಸೆಗಾಗಿಕೋಲಾರದ ಜಿ.ಇ.ಎಫ್.ನೇತ್ರದೀಪಕಣ್ಣಿನಆಸ್ಪತ್ರೆಯಲ್ಲಿಉಚಿತಚಿಕಿತ್ಸೆಯನ್ನು ಮಾಡಿಸಿಕೊಂಡು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.ಜಿ.ಇ.ಎಫ್.ನೇತ್ರದೀಪಕಣ್ಣಿನಆಸ್ಪತ್ರೆಯಡಾ: ಮಾಲಾ ಮತ್ತುತಂಡದವರು ನೇತ್ರತಪಾಸಣೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿರೋಟರಿ ಶ್ರೀನಿವಾಸಪುರ ಸೆಂಟ್ರಲ್ ನ ಕಮ್ಯೂನಿಟಿ ಸರ್ವೀಸ್ ನಿರ್ದೇಶಕರಾದಎಸ್. ಶಿವಮೂರ್ತಿ , ಶಾಖೆಯಅಧಿಕಾರಿಯಾದ ನಟೇಶ್ ಮತ್ತುಸಿಬ್ಬಂದಿ ಇನ್ನಿತರರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *