ಹಳೆಯಂಗಡಿ: ಸಿಮೆಂಟ್ ಪೈಪ್ಗಳನ್ನು ಹೇರಿಕೊಂಡು ಸಂಚರಿಸುತ್ತಿದ್ದ ಲಾರಿಯೊಂದು ಹೆದ್ದಾರಿಯಲ್ಲೇ ಪಲ್ಟಿ ಹೊಡೆದ ಘಟನೆ ಶುಕ್ರವಾರ ಮುಂಜಾನೆ ಪಾವಂಜೆ ಸೇತುವೆ ಸಮೀಪ ಸಂಭವಿಸಿದೆ.
IMG-20140926-WA0051

IMG-20140926-WA0053

IMG-20140926-WA0057
ಮಂಗಳೂರು ಕಡೆಯಿಂದ ಉಡುಪಿಗೆ ಹೋಗುತ್ತಿದ್ದ ಲಾರಿ ಸೇತುವೆ ಪ್ರಾರಂಭಕ್ಕೂ ಮುನ್ನ ಪಲ್ಟಿಯಾಗಿ ನಜ್ಜುಗುಜ್ಜಾಗಿದೆ. ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಸಿಮೆಂಟ್ ಪೈಪ್ಗಳು ಭಾಗಶ: ಹಾನಿಗೀಡಾಗಿವೆ. ಬೈಕ್ ಸವಾರನೊಬ್ಬ ಯಾವುದೇ ಸೂಚನೆ ನೀಡದೆ ಬೈಕ್ ಅನ್ನು ಸೇತುವೆ ಕೆಳಗಿನ ರಸ್ತೆಯೆಡೆಗೆ ತಿರುಗಿಸಿದ್ದು, ಇದರಿಂದ ಗಲಿಬಿಲಿಗೊಂಡ ಲಾರಿ ಚಾಲಕ ಹಠಾತ್ತಾಗಿ ಬ್ರೇಕ್ ಹಾಕಿದ್ದರಿಂದ ಘಟನೆ ಸಂಭವಿಸಿದೆ ಎನ್ನಲಾಗಿದೆ. ಲಾರಿ ಚಾಲಕ, ಕ್ಲೀನರ್ ಸಣ್ಣಪುಟ್ಟ ಗಾಯದೊಂದಿಗೆ ಅಪಾಯದೊಂದಿಗೆ ಪಾರಾಗಿದ್ದಾರೆ.
ಸ್ಥಳಕ್ಕೆ ಮೂಲ್ಕಿ ಠಾಣಾ ಪೊಲೀಸರು ಭೇಟಿ ಕೊಟ್ಟಿದ್ದಾರೆ. ಲಾರಿಯನ್ನು ಮೇಲಕ್ಕೆತ್ತಿ ಹೆದ್ದಾರಿ ಸಂಚಾರವನ್ನು ಸುಗಮಗೊಳಿಸುವ ಕಾರ್ಯ ನಡೆದಿದೆ.

By suddi9

Leave a Reply

Your email address will not be published. Required fields are marked *