ವಿಟ್ಲ :ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗ ದಲ್ಲಿ ಸಾಹಿತ್ಯ ಸಂಘ ಮತ್ತು ಮೂರ್ಕಜೆ ಮೈತ್ರೇಯಿ ಗುರುಕುಲದ ಸಹಯೋಗದೊಂದಿಗೆ ಸಂಸ್ಕøತ ದಿನಮ್ ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಗುರುಕುಲದ ಮಾತೃಶ್ರೀ ಪದ್ಮಾ, ವಿದ್ಯಾರ್ಥಿಗಳಾದ ಜ್ಯೋತಿ ಮತ್ತು ಪುಷ್ಪಾ ಭಾಗವಹಿಸಿದ್ದರು.

ಸಂಸ್ಕøತ ನಿವೃತ್ತ ಅಧ್ಯಾಪಕ ಕೃಷ್ಣ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕರುಗಳಾದ ಶ್ರೀ ಹರಿ ಶರ್ಮ ಮತ್ತು ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರಜೀತ್ ಸ್ವಾಗತಿಸಿ, ಅಭಿಷೇಕ್ ಭಟ್ ವಂದಿಸಿ, ಶ್ರದ್ಧಾ ನಿರೂಪಿಸಿದರು.
