ಕೈಕಂಬ; ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ ಎಂದು ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ವಿಜಯಾ ಗೋಪಾಲ್ ಸುವರ್ಣರವರು ಹೇಳಿದರು.ಅವರು ಇಂದು ಪೋಂಪೈ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರು,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಬಜಪೆ, ಗ್ರಾಮ ಆರೋಗ್ಯ ಸಮಿತಿ ಕಂದಾವರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ತನ್ಯಪಾನ ಸಪ್ತಾಹ ಕಾರ್ಯವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

20190813_131056

ಸ್ತನ್ಯಪಾನದ ಬಗ್ಗೆ ಫಾ! ಮುಲ್ಲರ್ಸ್ ಸಲ್ವದೊರ್ ಮೊಂತೇರೊ ಇದರ ಗ್ರಾಮೀಣ ಆರೋಗ್ಯ ತರಬೇತಿ ಕೇಂದ್ರದ ಡಾ!ಅನಘಾ ಮತ್ತು ಸಮಾಜ ಸೇವಕಿ ಇಝಾಬೆಲ್ಲಾ ಡಿ’ಸೋಜಾರವರು ಮಾಹಿತಿ ನೀಡಿದರು.  ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ಜೆಸಿಂತಾ ಮತ್ತು   ಮಂಗಳಾರವರು ಡೆಂಗ್ಯೂ ಮತ್ತು ಮಲೇರಿಯಾದ ಮಾಹಿತಿ ನೀಡಿದರು.

IMG-20190813-WA0004 (1)

ಪಂಚಾಯತ್ ಸದಸ್ಯೆ  ಸುಜಾತಾ ಭಂಡಾರಿ,  ಉಷಾ ಜೋಗಿ,  ಯಶ್ವಿ ತಾರವರುವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಂಗವಾಗಿ ಛದ್ಮವೇಷ ಸ್ಪರ್ಧೆ ನಡೆಯಿತು. ಸಾಮಾಜಿಕ ಕಾರ್ಯಕರ್ತರಾದ ಡೆಲ್ಸನ್ ಡಿಸೋಜ, ಆಶಾ ಮೋನೀಸ್ ರವರು ಉಪಸ್ಥಿತರಿದ್ದರು.

IMG-20190813-WA0006

 ಸಂಧ್ಯಾ ಪಿ. ರವರು ಪ್ರಾರ್ಥಿಸಿದರು. ಅಂಗನವಾಡಿ ಕಾರ್ಯಕರ್ತೆ ಉಷಾ  ಪ್ರಾಸ್ತಾವಿಕ ಮಾತುಗಳನ್ನಾಡಿದರು.   ರೇಣುಕಾ ಸ್ವಾಗತಿಸಿದರು.  ಹೇಮಾ ಮೂಡುಕರೆ ಇವರು ಧನ್ಯವಾದಗಳನ್ನು ಅರ್ಪಿಸಿದರು.

By suddi9

Leave a Reply

Your email address will not be published. Required fields are marked *