ಮಂಗಳೂರು:ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸುಮಾರು 36 ವರ್ಷಗಳಿಂದ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿಯನ್ನು ಹೊಂದಿರುವ ಶ್ರೀ ಪ್ರಮಥ ಕುಮಾರ್‍ರವರಿಗೆ ಜು.9 ರಂದು ಕಾಲೇಜಿನ ಸಭಾಂಗಣದಲ್ಲಿ ಡಾ. ಮೋಹನ ಆಳ್ವ ಅವರ ಅಧ್ಯಕ್ಷತೆಯಲ್ಲಿ ಬೀಳ್ಕೊಡುಗೆ ಸಮಾರಂಭ ಜರುಗಿತು.

ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಪ್ರಸ್ತುತ ಕರ್ನಾಟಕ ಹೈಕೋರ್ಟ್‍ನ ಹೆಚ್ಚುವರಿ ನ್ಯಾಯವಾದಿ ತಾರನಾಥ ಪೂಜಾರಿ ಮತ್ತು ಸರಕಾರಿ ಪ.ಪೂ.ಕಾಲೇಜು ಸಿದ್ದಕಟ್ಟೆ ಇಲ್ಲಿಯ ಪ್ರಾಂಶುಪಾಲ ಉದಯಕುಮಾರ್ ಮತ್ತು ನವೀನ್ ಕುಮಾರ್ ಹೊಸ ಮನೆ ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಾಲೇಜು ಪ್ರಾಂಶುಪಾಲ ಪದ್ಮನಾಭ ಎಚ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಬ್ರಮಣ್ಯ ಪಾಂಗಳ್ಳಾಯ ಕಾರ್ಯಕ್ರಮ ನಿರ್ವಹಿಸಿದರು. ಗಾಯತ್ರಿ ಮತ್ತು ವಾಸು ಅಭಿನಂದನಾ ಭಾಷಣ ಮಾಡಿ ನವೀನ್ ವಂದಿಸಿದರು.
