ಮೂಡುಬಿದಿರೆ: ಎಂ.ಜೆ ಇಂಪ್ರೆಸ್ ಡ್ಯಾನ್ಸ್ ಅಕಾಡಮಿ ಹಾಗೂ ಮಕ್ಕಿಮನೆ ಕಲಾವೃಂದದ ಆಶ್ರಯದಲ್ಲಿ ಎರಡುದಿನ ನಡೆದ ಅಂತರಾಷ್ಟ್ರೀಯ ಮಟ್ಟದ ನೃತ್ಯ ನಿರ್ದೇಶಕ ರಾಘವೇಂದ್ರ ಸಿ. ಕೆ ಅವರ ಸಿ. ಕೆ ಡ್ಯಾನ್ಸ್ ವರ್ಕ್ ಶಾಪ್ ಸಂಪನ್ನಗೊಂಡಿತು.
ಸಮಾರೋಪ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಪವರ್ ಲಿಫ್ಟರ್, ಏಕಲವ್ಯ ಪ್ರಶಸ್ತಿ ಪುರಸ್ಕೃತೆ ಅಕ್ಷತಾ ಪೂಜಾರಿ ಬೋಳ, ನೃತ್ಯ ನಿರ್ದೇಶಕ ರಾಘವೇಂದ್ರ ಸಿ. ಕೆ ಹಾಗೂ ಮಿಸ್ ಟೂರಿಸಂ ಇಂಟರ್ ನ್ಯಾಷನಲ್ ಇಂಡಿಯಾ -2018 ವಿಜೇತೆ ನಿಖಿತಾ ರಮ್ಯ ಸತೀಶ್ ಅವರನ್ನು ಸಮ್ಮಾನಿಸಲಾಯಿತು.

ರತ್ನಾಕರ ಜೈನ್ ಅಲಂಗಾರು, ಸುರೇಂದ್ರನ್ ಮರಿಯಾಡಿ, ವಾಣಿ ಬಿ. ವಾಮಂಜೂರ್, ಎಂ. ಜೆ ಇಂಪ್ರೆಸ್ ಡ್ಯಾನ್ಸ್ ಅಕಾಡೆಮಿಯ ನೃತ್ಯ ನಿರ್ದೇಶಕ ಅನೀಶ್ ಮೂಡುಬಿದಿರೆ ಮತ್ತು ಮಕ್ಕಿಮನೆ ಕಲಾವೃಂದದ ಮುಖ್ಯಸ್ಥ ಸುದೇಶ್ ಜೈನ್ ಮಕ್ಕಿಮನೆ ಉಪಸ್ಥಿತರಿದ್ದರು. ರವೀಶ್ ಜೈನ್ ಪಡುಕೊಣಾಜೆ ನಿರೂಪಿಸಿದರು.
