ವಿಟ್ಲ : ಜೂನ್ 21 : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗದಿನವನ್ನು ಆಚರಿಸಲಾಯಿತು.ಮುಖ್ಯ ಅತಿಥಿಯಾಗಿದ್ದ ಗಣಪತಿ ಪದವಿಪೂರ್ವ ಕಾಲೇಜಿನ ನಿವೃತ್ತ ಅಧ್ಯಾಪಕ ಅಡ್ಕ.ತ್ತಿಮಾರು ರಾಮಚಂದ್ರ ಭಟ್ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು “ಯೋಗವು ಪುರಾತನ ಭಾರತದ ಅಮೂಲ್ಯ ಕೊಡುಗೆ. ಅದು ತನು-ಮನಗಳ ನಡುವೆ ಐಕ್ಯತೆಯನ್ನು ಸಾಧಿಸುತ್ತದೆ. ನಿರಂತರ ಯೋಗಾಭ್ಯಾಸದಿಂದ ಹರಿದಾಡುವ ಚಿತ್ತವನ್ನು ಹತೋಟಿಯಲ್ಲಿಟ್ಟು ಬುದ್ಧಿ ಮತ್ತು ಮನಸ್ಸುಗಳ ನಡುವೆ ಸಮನ್ವಯತೆಯನ್ನು ವೃದ್ಧಿಸಬಹುದು” ಎಂದರು.
ಅಧ್ಯಕ್ಷತೆ ವಹಸಿದ್ದ ಸಂಚಾಲಕ ಪ್ರಹ್ಲಾದ್.ಜೆ.ಶೆಟ್ಟಿ ಮಾತನಾಡಿ “ ಯೋಗದಿಂದ ಮನಸ್ಸಿನ ನಿಗ್ರಹ ಸಾಧ್ಯ. ಈ ದಿನದ ಆಚರಣೆಯು ಯೋಗದ ಮಹತ್ವವನ್ನು ವಿಶ್ವಕ್ಕೆ ಸಾರುವ ಪ್ರಯತ್ನವಾಗಿದೆ. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಕೊಂಬಿಲ ನಾರಾಯಣ ಶೆಟ್ಟಿ, ಆಡಳಿತಾಧಿಕಾರಿ ಸಿ.ಶ್ರೀಧರ್, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ .ವಿ.ಶೆಟ್ಟಿ , ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೇಸ್.ಪಿ.ಸಲ್ಡಾನಾ ಉಪಸ್ಥಿತರಿದ್ದರು.
ಯೋಗ ತರಬೇತುದಾರ ರಾಜೇಶ್ ಅವರ ನಿರ್ದೇಶನದಲ್ಲಿ ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಲಾಯಿತು. ಸಹ ಶಿಕ್ಷಕಿ ಹಂಸವೇಣಿ ಕಾರ್ಯಕ್ರಮ ನಿರೂಪಿಸಿ, ರಶ್ಮಿ ಫೆರ್ನಾಡಿಸ್ ಸ್ವಾಗತಿಸಿ ವಂದಿಸಿದರು.

![IMG_2710[1]](http://www.suddi9.com/wp-content/uploads/2019/06/IMG_27101-650x488.jpg)