ದ.ಕ.ಜಿ.ಪಂ.ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲಇದರ ಪ್ರಾರಂಭೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಶಾಲಾಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ಸುಬ್ರಾಯ ಪೈಯವರು ಮೆರವಣಿಗೆಗೆ ಚಾಲನೆ ನೀಡಿದರು ವಿಟ್ಲದ ಪ್ರಮುಖ ಬೀದಿಗಳಲ್ಲಿ ವಿವಿಧ ಬೊಂಬೆವೇಷಗಳು, ಹುಲಿವೇಷ, ಜಾಗೃತಿ ಮೂಡಿಸುವ ಘೋಷವಾಕ್ಯಗಳು, ಬ್ಯಾಂಡ್‍ಸೆಟ್ ಮೂಲಕ ವಿದ್ಯಾರ್ಥಿಗಳ ಮೆರವಣಿಗೆ ಸಾಗಿಬಂದಿತು. ಈ ಮೆರವಣಿಗೆಗೆ ಕೃಷ್ಣಯ್ಯ ಕೆ ವಿಟ್ಲ, ಆರ್ ಕೆ ಆಟ್ರ್ಸ್‍ನ ರಾಜೇಶ್ ವಿಟ್ಲ ಸಹಕರಿಸಿದರು.

SHV_6064ಹೊಸತಾಗಿ ಸೇರ್ಪಡೆಗೊಂಡ ಮಕ್ಕಳನ್ನು ಆರತಿ ಬೆಳಗಿಸಿ, ಪುಷ್ಪವೃಷ್ಠಿಗೈದು ಸ್ವಾಗತಿಸಲಾಯಿತು. ಎಲ್.ಕೆ.ಜಿಗೆ ಸೇರ್ಪಡೆಗೊಂಡ ಪುಟ್ಟ ಮಕ್ಕಳನ್ನು ಮಡಿಲಲ್ಲಿ ಕುಳ್ಳಿರಿಸಿ ಸಾಂಕೇತಿಕವಾಗಿ ಓದಿಸಲಾಯಿತು.. ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದಮಯಂತಿ , ಉಪಾಧ್ಯಕ್ಷರಾದ ಜಯಂತ್ ವಿಟ್ಲ, ಎಸ್.ಡಿ.ಎಂ.ಸಿಯ ಅಧ್ಯಕ್ಷರು, ಪದಾಧಿಕಾರಿಗಳು, ಸಿ.ಆರ್.ಪಿ ರವಿಪ್ರಸಾದ್, ಶಾಲಾ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಪುಷ್ಪಾ ಹೆಚ್, ಇವರುಗಳು ಮಕ್ಕಳಿಗೆ ಸಾಂಕೇತಿಕವಾಗಿ ಪುಸ್ತಕ ವಿತರಣೆ ಮಾಡಿದರು.

SHV_6074

By suddi9

Leave a Reply

Your email address will not be published. Required fields are marked *