ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಿಇಟಿಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಏಪ್ರಿಲ್ ತಿಂಗಳಿನಲ್ಲಿ ನಡೆಸಿದ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶ ಪರೀಕ್ಷೆಯಲ್ಲಿ ಎಕ್ಸಲೆಂಟಿನ ವಿದ್ಯಾರ್ಥಿಗಳಾದ ಸಂತೋಷ್ ರೆಡ್ಡಿ ಎನ್ (ಫಾರ್ಮಸಿ -91, ಇಂಜಿನಿಯರಿಂಗ್-546, ಅಗ್ರಿ-94, ವೆಟರ್ನಿಟಿ-47, ಬಿ.ಎನ್.ವೈ.ಎಸ್-49), ಸಿರಿ ಸಿ.ಜೆ (ಫಾರ್ಮಸಿ -311, ಇಂಜಿನಿಯರಿಂಗ್-610, ಅಗ್ರಿ-130, ವೆಟರ್ನಿಟಿ-184, ಬಿ.ಎನ್.ವೈ.ಎಸ್-130), ಶ್ಲೋಕಶ್ರೀ (ಫಾರ್ಮಸಿ -407, ಇಂಜಿನಿಯರಿಂಗ್-1264), ಸಂಜಯ್ ಜಿ ಬಿ (ಫಾರ್ಮಸಿ -1811, ಇಂಜಿನಿಯರಿಂಗ್-1153, ಅಗ್ರಿ-413, ವೆಟರ್ನಿಟಿ-1406, ಬಿ.ಎನ್.ವೈ.ಎಸ್-879), ಕೀರ್ತಿ ಬಿ.ಎನ್.ಸಿ (ಇಂಜಿನಿಯರಿಂಗ್-188), ಸುದೀಪ್ ಜಾವಳಿ (ಫಾರ್ಮಸಿ -663, ಇಂಜಿನಿಯರಿಂಗ್-1162, ಅಗ್ರಿ-295, ವೆಟರ್ನಿಟಿ-516, ಬಿ.ಎನ್.ವೈ.ಎಸ್-251), ಸಮೀದ್ ಕುಮಾರ್ (ಫಾರ್ಮಸಿ -1935, ಇಂಜಿನಿಯರಿಂಗ್-2235, ಅಗ್ರಿ-974, ವೆಟರ್ನಿಟಿ-1523, ಬಿ.ಎನ್.ವೈ.ಎಸ್-1275), ಸುಪ್ರೀತ್ ಬಿ (ಇಂಜಿನಿಯರಿಂಗ್-960), ಕಾರ್ಥಿಕ್ ವಿ ಪೈ ಅವರು ಇಂಜಿನಿಯರಿಂಗ್ನಲ್ಲಿ 1007 ರ್ಯಾಂಕ್ ಗಳಿಸಿದ್ದಾರೆ.
ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಅಭಿನಂದಿಸಿದ್ದಾರೆ.
