ಮಂಗಳೂರು : ಈ ಬಾರಿಯ ಪಿಯು ಬೋರ್ಡ್ ಪರೀಕ್ಷೆಯಲ್ಲಿ 583(ಶೇ. 97.16) ಅಂಕದೊಂದಿಗೆ ಅಗ್ರ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಮಂಗಳೂರು ವಿಕಾಸ್ ಪಿಯು ಕಾಲೇಜಿನ ಪೃಥ್ವೀಗೆ ಕಾಲೇಜಿನ ಅಧ್ಯಕ್ಷ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಶನಿವಾರ ಕಾಲೇಜಿನಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು.

cb1471c7-d7c3-47f5-8d83-8292b19c778c

ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಗಳಿಸಿರುವ ಪೃಥ್ವೀ ಗುರುಪುರ ಕೈಕಂಬದ ಜಿ ಟಿ ಸುಬ್ರಹ್ಮಣ್ಯ ಭಟ್ ಮತ್ತು ಶ್ರೀದೇವಿ ಜಿ ಟಿ ದಂಪತಿಯ ಪುತ್ರಿಯಾಗಿದ್ದಾಳೆ. ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಟ್ರಸ್ಟಿ ಡಾ. ರಾಜೇಶ್ ಬಳ್ಳಾಲ್, ಜಿ ಕೊರಗಪ್ಪ ಮತ್ತು ಸೂರಜ್ ಕಲ್ಯ(ಸಲಹೆಗಾರರು), ಡಾ. ಅನಂತ ಪ್ರಭು, ನಿರ್ದೇಶಕ ರಾಜಾರಾಮ್ ರಾವ್, ಡೀನ್ ಡಾ. ಮಂಜುಳಾ ರಾವ್, ಪ್ರಾಂಶುಪಾಲ ಸುನೀಲ್ ಮಲಗಿ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *