“ಪೀಪಲ್ ಫಸ್ಟ್” ನ ತತ್ತ್ವದೊಂದಿಗೆ ಪ್ರಸಾರಗೊಳ್ಳುತ್ತಿರುವ ಆರ್.ಜೆ.ಶ್ರುತಿ ಅವರ, “ಯೊಚೇನ್ ಯಾಕೆ, ಚೇಂಜ್ ಒಕೆ” ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಸಾಮಾಜಿಕವಿಷಯಗಳನ್ನು ಮುಂಚೂಣಿಗೆ ತರುತ್ತಿದ್ದಾರೆ. ರಾಷ್ಟ್ರದ ಜನ ತಮ್ಮನ್ನು ತಾವು ತೆರೆದುಕೊಳ್ಳಲು ಸಾಧ್ಯವಾಗುವಂಥ ಸಾಮಾಜಿಕ ಸವಾಲುಗಳು ಮತ್ತು ಪ್ರಚಲಿತಸಮಸ್ಯೆಗಳ ಬಗ್ಗೆ ಸಕಾರಾತ್ಮಕ ಮಾತುಕತೆ ನಡೆಸಿ ಅದರಲ್ಲಿ ಜನಸಾಮಾನ್ಯರು ಪಾಲ್ಗೊಳ್ಳುವಂತೆ ಮಾಡುವುದು ಕಾರ್ಯಕ್ರಮದ ಉದ್ದೇಶ.
ಪಟ್ ಪಟ್ ಪಟಾಕಿ ಎಂದೇಹೆಸರುವಾಸಿಯಾಗಿರುವ ಬೆಂಗಳೂರಿನ ಪ್ರಖ್ಯಾತ ಆರ್.ಜೆ. ಶೃತಿ ಈ ಕಾರ್ಯಕ್ರಮದಲ್ಲಿ ಕೇಳುಗರಿಗೆ ಸ್ಫೂರ್ತಿ ನೀಡುವ ಸಂಭಾಷಣೆ ನಡೆಸುತ್ತಾರೆ. ಮುಂಬರುವಕಂತಿನಲ್ಲಿ ಆರ್ ಜೆ ಚರ್ಚಿಸಿದ ಅಂತಹ ಒಂದು ವಿಷಯವೆಂದರೆ ಮಕ್ಕಳ ದತ್ತು ತೆಗೆದುಕೊಳ್ಳುವಿಕೆಯಾಗಿದೆ. ಈ ಚರ್ಚೆಯಲ್ಲಿ ನಮ್ಮೊಂದಿಗೆ ಅತಿಥಿಯಾಗಿ ನಟಿ-ರಾಜಕಾರಣಿಯಾದ ಉಮಾಶ್ರೀ ಪಾಲ್ಗೊಂಡರು.
ಹಿಂದೆ ಭಾರತದಲ್ಲಿ ಶಾಪವೆಂದೇ ಪರಿಗಣಿತವಾಗಿದ್ದ ದತ್ತು ಸ್ವೀಕಾರ ಇಂದು ಜನರ ಮನಸ್ಥಿತಿಯೊಂದಿಗೆ ಬದಲಾಗುತ್ತಿದೆ. ಸಮಾಜ ಇದನ್ನು ಒಪ್ಪಿಕೊಳ್ಳಲುಪ್ರಾರಂಭಿಸಿದೆ. ಈ ಗಂಭೀರ ವಿಷಯದ ಕುರಿತು ಯೋಚನೆ ಯಾಕೆ ಚೇಂಜ್ ಓಕೆ ಕಾರ್ಯಕ್ರಮದಲ್ಲಿ ಆರ್ ಜೆ ಶ್ರುತಿ ಅವರೊಂದಿಗೆ ಮಾತನಾಡಿದೆ ಹಿರಿಯನಟಿರಾಜಕಾರಣಿಉಮಾಶ್ರೀ, “ದೇಶದಯಾವುದೇಭಾಗದಲ್ಲಿವಾಸಿಸುವವ್ಯಕ್ತಿಯುಎಲ್ಲಿಂದಲಾದರೂಮಗುವನ್ನುದತ್ತುಪಡೆದುಕೊಳ್ಳಬಹುದು. ದತ್ತುತೆಗೆದುಕೊಳ್ಳುವಾಗಅಳವಡಿಸಿಕೊಳ್ಳಬೇಕಾದಹಲವಾರುವಿಧಾನಗಳುಇವೆ, ಅವುಗಳನ್ನುಅನುಸರಿಸುವುದುಬಹಳಮುಖ್ಯ. ಈಪ್ರಕ್ರಿಯೆಈಗಆನ್ಲೈನ್ನಲ್ಲೇನಡೆಸಲ್ಪಡುವುದರಿಂದಈಕೆಲಸಮತ್ತಷ್ಟುಸುಲಭವಾಗಿದೆ. ಯಾವುದೇಕಾನೂನಿನದಾಖಲಾತಿಯಿಲ್ಲದೆಮಗುವನ್ನುದತ್ತುಪಡೆಯುವುದುಕಾನೂನಿನದೃಷ್ಟಿಯಲ್ಲಿಕ್ರಿಮಿನಲ್ಎಂದುಪರಿಗಣಿಸಲ್ಪಡುತ್ತದೆಮತ್ತುಇದುಅನಿರೀಕ್ಷಿತದುಷ್ಪರಿಣಾಮಗಳಿಗೆಕಾರಣವಾಗಬಹುದು. ಹೀಗಾಗಿ, ಎಲ್ಲಾಕಾನೂನುಪ್ರಕ್ರಿಯೆಗಳಪ್ರಕಾರಮಗುವನ್ನುದತ್ತುಪಡೆದುಕೊಳ್ಳಲುನಾವುಶಿಫಾರಸುಮಾಡುತ್ತೇವೆ”ಎಂದರು.