ಬಂಟ್ವಾಳ: ಜೇಸಿಐ ಜೋಡುಮಾರ್ಗ ನೇತ್ರಾವತಿವತಿಯಿಂದ ಮಕ್ಕಳ ಬೇಸಿಗೆಶಿಬಿರ ವಿಕಸನ ಬಿ.ಸಿ.ರೋಡಿನಲ್ಲಿ ನಡೆಯಿತು.ಜಯಲಕ್ಷ್ಮಿ ವಿ. ಭಟ್ ಕಾರ್ಯಕ್ರಮ ಉದ್ಘಾಟಿಸಿದರು.
ಝಂಭಾ ವ್ಯಾಯಾಮ ತರಬೇತಿ, ಯೋಗಾಸನ, ಪ್ರಾಣಾಯಾಮ ತರಬೇತಿ, ಸ್ವಚ್ಚ ಪರಿಸರ ಮತ್ತು ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಪ್ರಾತಿಕ್ಷಿಕೆ, ಚಿತ್ರಕಲೆ, ಕ್ರಾಪ್ಟ್ ತರಬೇತಿ, ಮುಖವಾಡ, ಗಾಳಿಪಟ ತಯಾರಿಕಾ ತರಬೇತಿ, ನಾಟಕ ರಂಗ ಕಲಾ ತರಬೇತಿ ಹೀಗೆ ಹಲವಾರು ತರಬೇತಿಗಳು ನಡೆದವು. ರಮ್ಯಶ್ರೀ, ರಾಜಮಣಿ ರಾಮಕುಂಜ, ಮುರಳಿಕೃಷ್ಣ, ಮುರಳೀಧರಆಚಾರ್, ಮೂರ್ತಿ ದೇರಾಜೆ ಮುಂತಾದ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ತರಬೇತಿ ನೀಡಿದರು. 
೨೭ರಂದು ಶಿಬಿರದ ಸಮಾರೋಪ ಸಮಾರಂಭ ನಡೆಯಿತು.ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕಿ ಸುಜಾತಾರವಿಶಂಕರ್ ಅತಿಥಿಯಾಗಿ ಭಾಗವಹಿಸಿದ್ದರು. ಮರಗಿಡಗಳನ್ನು ಕಡಿಯದೇ ಹೊಸ, ಹೊಸ ಗಿಡ ಮರಗಳನ್ನು ನೆಡುವುದರೊಂದಿಗೆ ತಮ್ಮಪರಿಸರವನ್ನು ಸ್ವಚ್ಚವಾಗಿರಿಸಲು ಮಕ್ಕಳಲ್ಲಿ ಈಗಿನಿಂದಲೇ ಜ್ಞಾನವನ್ನು ತುಂಬಿದರೆ ಮುಂದೆ ಅಗುವಂತಹ ಅಪಾಯಕಾರಿ ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಕರೆನೀಡಿದರು. ಜೇಸಿ ಅಧ್ಯಕ್ಷ ಹರ್ಷರಾಜ್ ಅಧ್ಯಕ್ಷತೆವಹಿಸಿದ್ದರು. ಸುಮಾರು ೨೫ ಕ್ಕಿಂತಲೂ ಮಿಕ್ಕಿ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರುಇದೇವೇಳೆಶಿಬಿರಾರ್ಥಿ ಮಕ್ಕಳಿಗೆ ಪ್ರಮಾಣಪತ್ರ ನೀಡಲಾಯಿತು. ಜೇಸಿರೆಟ್ ಅಧ್ಯಕ್ಷೆ ಅಮಿತಾ ಹರ್ಷರಾಜ್, ಜೇಜೇಸಿ ಅಧ್ಯಕ್ಷರೊನಿತ್ ಬಿ.ಜಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರವೀಂದ್ರಕುಕ್ಕಾಜೆ ವಂದಿಸಿದರು.