ಮಂಗಳೂರು: ಇಲ್ಲಿನ ಪಂಪ್ವೆಲ್ ಸರ್ಕಲ್ನಲ್ಲಿ ಬುಧವಾರ ಮುಂಜಾನೆ ಉಂಟಾದ ಭೀಕರ ರಸ್ತೆ ಅಪಘಾತಕ್ಕೆ ಟ್ರಾಫಿಕ್ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರು ದಾರುಣವಾಗಿ ಮೃತಪಟ್ಟರೆ ಸಹಸಿಬ್ಬಂದಿ ಗಂಭೀರವಾಗಿ ಪಾರಾದ ಘಟನೆ ಸಂಭವಿಸಿದೆ.
ಮೃತಪಟ್ಟ ದುರ್ದೈವಿಯನ್ನು ಸಂಚಾರಿ ಪೂರ್ವ ಠಾಣೆಯ ಕಾನ್ ಸ್ಟೇಬಲ್ ಭಾಸ್ಕರ್(38) ಎಂದು ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂವರನ್ನು ಅಶ್ವಿನ್ ಎಂದು ಗುರುತಿಸಲಾಗಿದೆ.

police (1)

 

police (3)

police

police (2)



ಘಟನೆಯ ವಿವರ: ಭಾಸ್ಕರ್ ಇವರು ತನ್ನ ಸಹಸಿಬ್ಬಂದಿ ಅಶ್ವಿನ್ ಎಂಬವರ ಜೊತೆ ತನ್ನ ಪಲ್ಸರ್ ಬೈಕ್ನಲ್ಲಿ ಹಿಂಬದಿ ಸವಾರರಾಗಿ ಸಂಚರಿಸುತ್ತಿದ್ದರು. ಈ ವೇಳೆ ಯಮದೂತನಂತೆ ಬಂದೆರಗಿದ ಆಲ್ಟೋ ಕಾರ್ ಡಿಕ್ಕಿ ಹೊಡೆದು ಅಶ್ವಿನ್ ಹಾಗೂ ಭಾಸ್ಕರ್ ಅವರನ್ನು ಬೈಕ್ನಿಂದ ಕೊಡವಿ ಹಾಕಿತು. ಈ ಪೈಕಿ ಅಶ್ವಿನ್ ಹೆಲ್ಮೆಟ್ ಧರಿಸಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಆದರೆ ಕೈ ಕಾಲು ಹಾಗೂ ದೇಹದ ಕೆಲವು ಭಾಗಕ್ಕೆ ಗಂಭೀರವಾದ ಏಟಾಗಿದೆ. ಆದರೆ ಭಾಸ್ಕರ್ ಅವರನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಕಾರ್ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಭಾಸ್ಕರ್ ಮೃತದೇಹವನ್ನು ಮಂಗಳೂರಿನ ಶವಾಗಾರದಲ್ಲಿರಿಸಲಾಗಿದೆ.
ಉತ್ತಮ ಗುಣನಡತೆ ಹೊಂದಿದ್ದ ಭಾಸ್ಕರ್ ಅವರು ಎಲ್ಲರ ಪ್ರೀತಿಪಾತ್ರರಾಗಿದ್ದರು ಎಂದು ಅವರ ಸಹಸಿಬ್ಬಂದಿ ಕೊಂಡಾಡುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *