ಪೊಳಲಿ : ಶ್ರೀ ಕ್ಷೇತ್ರ ಪೊಳಲಿಯಲ್ಲಿ ಇತ್ತೀಚೆಗೆ ನಡೆದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಗೋವಾದ ಉದ್ಯಮಿ, ದೇವಿಯ ಪರಮ ಭಕ್ತ ನರೇಶ್ ಪೈ ಎಂಬವರು ಭದ್ರಕಾಳಿ ದೇವಿಗೆ 154 ಹಿತ್ತಾಳೆಯ ದೀಪದ ಹಣತೆಗಳ ಒಂದು ಪರಿಕರ ಹಾಗೂ ಅವರ ಆಪ್ತ ಸ್ನೇಹಿತರು ದೇವಿಯ ಪರಮಭಕ್ತರೊಬ್ಬರು ಶ್ರೀ ಕ್ಷೇತ್ರಪಾಲ ದೇವರಿಗೆ 48 ದೀಪದ ಹಣತೆಗಳ ಪರಿಕರ ಹರಕೆಯಾಗಿ ಒಪ್ಪಿಸಿದ್ದಾರೆ.
ಮೇಜಿನಂತಹ ಒಂದು ಪರಿಕರದ ಮೇಲ್ಗಡೆ 148 ಹಿತ್ತಾಳೆ ಹಣತೆಗಳಿದ್ದರೆ(ದೀಪ), ಮತ್ತೊಂದು ಇಂತಹದ್ದೇ ಪರಿಕರದಲ್ಲಿ 48 ದೀಪದ ಹಣತೆಗಳಿವೆ. ಇದೊಂದು ವಿಶೇಷ ವಿನ್ಯಾಸದ ಸಾಲು ಹಣತೆ ದೀಪವಾಗಿದ್ದು, ಆಕರ್ಷಕವಾಗಿದೆ. ಇದರ ಮೊತ್ತ ಅಂದಾಜು ಒಂದು ಲಕ್ಷ ರೂ ಎಂದು ಹೇಳಲಾಗಿದೆ. ಇದನ್ನೀಗ ದೇವರ ಮುಂದೆ ಉರಿಸಿಡಲಾಗುತ್ತಿದೆ.

