ಬಂಟ್ವಾಳ: ಮಾಜಿ ಮುಖ್ಯಮಾತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯರವರ ಆದೇಶದಂತೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ ರಮಾನಾಥ ರೈ ಯವರ ಶಿಫಾರಾಸಿನ ಮೇರೆಗೆ ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ.) ಬಂಟ್ವಾಳ ಸಮುದಾಯ ಭವನಕ್ಕೆ ರೂ. 75,00,000 ಮಂಜೂರುಗೊಂಡು ಅದರಲ್ಲಿ 2ನೇ ಕಂತು ಹಣ ರೂ 37,50,000 ಬಿಡುಗಡೆಗೊಂಡಕ್ಕೆ ಸಂಘದ ಸದಸ್ಯರಿಂದ ಶ್ರೀ ಬಿ ರಮಾನಾಥ ರೈ ಯವರನ್ನು ಅಭಿನಂದಿಸಲಾಯಿತು

ಈ ಸಂದರ್ಭದಲ್ಲಿ ಕಟ್ಟಡ ಸಮಿತಿಯ ಗೌರವ ಅಧ್ಯಕ್ಷರು, ಲೋಕೇಶ್ ಆಚಾರ್ಯ ಪುಂಜಾಲಕಟ್ಟೆ, ಸಂಘದ ಅಧ್ಯಕ್ಷರು ಲಯನ್ ಸುಧಾಕರ ಆಚಾರ್ಯ ಮಾರ್ನಬೈಲ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಅಸಂಘಟಿತ ಜಿಲ್ಲಾ ಕಾರ್ಮಿಕ ಸಂಘಟಣೆÀ ಅಧ್ಯಕ್ಷರಾದ ಶ್ರೀ ಅಬ್ಬಾಸ್ ಆಲಿ, ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನದ ರಥಬೀದಿ ಮಂಗಳೂರು ಸದಸ್ಯರಾದ ಎಸ್ ಎಮ್ ಗೋಪಾಲ ಕೃಷ್ಣ ಆಚಾರ್ಯ, ಕಾರ್ಯದರ್ಶಿ ಸಂದೀಪ್ ಬಿ ಆಚಾರ್ಯ, ಕೋಶಾಧಿಕಾರಿ ಜಯಚಂದ್ರ ಆಚಾರ್ಯ ಸರಪಾಡಿ, ಸುನೀಲ್ ಬಿ ಆಚಾರ್ಯ ಮಾಲಕರು ಅಪೂರ್ವ ಜುವೆಲ್ಯರ್ಸ್, ಚಂದ್ರಶೇಖರ ಆಚಾರ್ಯ ಪೂಂಜರಕೋಡಿ, ಅಶೋಕ ಆಚಾರ್ಯ ವಾಸುಕಿ, ಪುರಂದರ ಆಚಾರ್ಯ, ಪ್ರಭಾಕರ ಆಚಾರ್ಯ ಹಾಗೂ ಸದಸ್ಯರು.
