ಪೊಳಲಿ: ಪೊಳಲಿ ಬ್ರಹ್ಮಕಲಶೋತ್ಸವದ ವಿಧಿವಿಧಾನಗಳು ಆರಂಭಗೊಂಡು 8 ದಿನ ಕಳೆದಿದೆ. ಆರಂಭದ ದಿನದಿಂದ ಇಲ್ಲಿಯವರೆಗೆ ಸಾವಿರಾರು ಮಂದಿ ಸ್ವಯಂ ಸೇವಕರು ಹಗಲು-ರಾತ್ರಿ ಎನ್ನದೆ ಹಲವು ರೀತಿಯ ಕೆಲಸಗಳನ್ನು ಮಾಡಿ ಸಹಕರಿಸುತ್ತಿದ್ದಾರೆ. ಎಲ್ಲಾ ಸ್ವಯಂಸೇವಕರು ಅತ್ಯಂತ ಶ್ರದ್ಧೆಯಿಂದ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಎಲ್ಲಾ ಕೆಲಸಕ್ಕಿಂತ ಅತ್ಯಂತ ಕಷ್ಟವಾದ ಕೆಲಸ ಎಂದರೆ ಅದು ಬಾಣಸಿಗ ಕೆಲಸ.

11vp annadana-2

ಏಕೆ ಗೊತ್ತೇ? ಬ್ರಹ್ಮಕಲಶೋತ್ಸವ ಪ್ರಾರಂಭಗೊಂಡು ಇಲ್ಲಿಯವರೆಗೆ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಬಂದು ಹೋಗಿರುತ್ತಾರೆ. ಅವರಿಗೆಲ್ಲಾ ರುಚಿಯಲ್ಲಿ ಶುಚಿಯಲ್ಲಿ ಯಾವುದೇ ರೀತಿಯ ಕೊರತೆಯಾಗದಂತೆ ಅಡುಗೆಯನ್ನು ಮಾಡಿ ಬಡಿಸುವುದು ಎಂದರೆ ಸುಲಭದ ಮಾತಲ್ಲ. ಈವರೆಗಿನ 8 ದಿನಗಳ ಕಾಲ ಅಂದಾಜು ಐದು ಲಕ್ಷ ಮಂದಿ ಊಟೋಪಚಾರ ಸೇವಿಸಿಕೊಂಡು ಹೋಗಿದ್ದು, ಯಾರಿಗೂ ಊಟ ತಿಂಡಿಗೆ ಕೊರತೆಯಾಗದಂತೆ ನಿಬಾಯಿಸುವು ಅತ್ಯಂತ ಸವಾಲಿನ ಕೆಲಸವಾಗಿದೆ.

vanas

ಪ್ರಾರಂಭದ ದಿನದಿಂದ ಇಲ್ಲಿಯವರೆಗೆ ಹಲವಾರು ರೀತಿಯ ಭೋಜನಗಳನ್ನು ತಯಾರಿದ್ದಾರೆ. ಆದರೆ ಯಾವುದೇ ಕೆಲಸದಲ್ಲಿ ತೊಂದರೆಯಾಗದಂತೆ ಈ ವರೆಗೆ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿರುತ್ತಾರೆ. ಬಾಣಸಿಗರ ಈ ಕೆಲಸ ಅತ್ಯಂತ ಪ್ರಶಂಶನೀಯ. ಕಳೆದ 8 ದಿನದಿಂದ ಇಲ್ಲಿಯವರೆಗೆ ಹತ್ತಾರು ಬಗೆಯ ಭೋಜನಗಳ ಉಣಬಡಿಸಿರುತ್ತಾರೆ. ಅವುಗಳನ್ನು ನೋಡುವುದೇ ಒಂದು ಕುಶಿ. ಐವತ್ತು ಮಂದಿ ಬ್ರಾಹ್ಮಣರ ತಂಡದಲ್ಲಿ ಸುಮಾರು 200ಕ್ಕಿಂತಲೂ ಹೆಚ್ಚಿನ ಬಾಣಸಿಗರಿದ್ದು ಇವರಿಗೆ ಸ್ವಯಂಸೇವಕರು ಸಾಥ್ ನೀಡುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *