ಪೊಳಲಿ : ಸಂಪೂರ್ಣ ನವೀಕರಣಗೊಂಡ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ 4ರಿಂದ ಮಾ. 13ರವರೆಗೆ ಜರುಗಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಂಗವಾಗಿ ಗುರುಪುರ ಕೈಕಂಬದಿಂದ ಅಡ್ಡೂರು-ಪೊಳಲಿತನಕ ರಸ್ತೆ ಇಕ್ಕೆಲವು ಕೇಸರಿಮಯವಾಗಿ ಕಂಗೊಳಿಸುತ್ತಿದೆ. ಅತಿ ಸುಂದರವಾಗಿ ಅಲಂಕೃತಗೊಂಡಿರುಯವ ಪೊಳಲಿ ದೇವಾಲಯ ನೋಡುಗರು ಭಾವಪರವಶರಾಗುವಂತಿದೆ.3-0004

ಮುಂದಿನ ಒಂಬತ್ತು ದಿನ ಯಾವುದೇ ವಾಹನಗಳು ದೇವಳದತ್ತ ಮುಂದುವರಿಯದೆ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಎಕ್ರೆಗಟ್ಟಲೆ ವಿಶಾಲ ಗದ್ದೆಯಲ್ಲಿ ವ್ಯವಸ್ಥೆಗೊಳಿಸಲಾದ ಮೂರು ಪ್ರತ್ಯೇಕ ಪಾರ್ಕಿಂಗ್ ಪ್ರದೇಶಗಳಲ್ಲೇ ಬಸ್, ಕಾರು, ದ್ವಿಚಕ್ರ ವಾಹನಗಳ ನಿಲುಗಡೆ ಮಾಡಬೇಕಿದೆ. ವಾಹನಗಳಿಗೆ ಸೂಕ್ತ ಮಾರ್ಗದರ್ಶಕರಾಗಿ ನೂರಾರು ಮಂದಿ ಸ್ವಯಂಸೇವಕರು ನಿರಂತರ ಸೇವೆಯಲ್ಲಿದ್ದಾರೆ.DSC_0011

ಮುಖ್ಯ ರಸ್ತೆಯಿಂದ ಪೊಳಲಿ ದೇವಳಕ್ಕೆ ಭಕ್ತರು ನಡೆದುಕೊಂಡೇ ಸಾಗಬೇಕು. ಮಹಿಳೆಯರ ಸಹಿತ ಸ್ವಯಂಸೇವಕರು ದೇವಸ್ಥಾನದೊಳಗೆ ಹಾಗೂ ಹೊರಗಡೆ ನಿರಂತರ ಸ್ವಚ್ಚತಾ ಕಾರ್ಯದಲ್ಲಿ ನಿರತರಾಗಿದ್ದಾರೆ.ಮುಂದಕ್ಕೆ ಸಾಗಿದಂತೆ ಭಕ್ತರ ಸ್ವಾಗತಿಸುವಂತಿದೆ ವಿದ್ಯುದ್ದೀಪಗಳಿಂದ ಅಲಂಕೃತಗೊಂಡಿರುವ ಶಿಲಾಮಯ ಪೊಳಲಿ ಅಮ್ಮನವರ ದೇವಳ. ಮಾಚ್ ್ 3ರಿಂದಲೇ ಇಲ್ಲಿ ಭಕ್ತರ ಪ್ರವಾಹ ಹರಿದು ಬರಲಾರಂಭಿಸಿದೆ. ನಾಳೆ ಬೆಳಿಗ್ಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಮೊದಲ ದಿನವಾಗಿದ್ದು, ಒಂದೊಂದು ವಿಶೇಷ ಪೂಜೆಗಳ ಬಳಿಕ ಮಾ. 13ರಂದು ದೇವಾಲಯದ ಎಲ್ಲ ಗುಡಿ ಗೋಪುರ, ಕೊಡಿಮರಕ್ಕೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ.

3-2

ಬೃಹತ್ ವೇದಿಕೆಗಳು :

ದೇವಸ್ಥಾನದ ಚೆಂಡಿನ ಗದ್ದೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳಿಗಾಗಿ ಶ್ರೀ ರಾಜರಾಜೇಶ್ವರಿ ಹೆಸರಿನ ಬೃಹತ್ ವೇದಿಕೆ ನಿರ್ಮಾಣಗೊಂಡಿದೆ. ಪಕ್ಕದಲ್ಲೇ ಒಮ್ಮೆಗೆ ಎಂಟು ಸಾವಿರದಷ್ಟು ಮಂದಿ ಊಟ ಮಾಡಬಹದಾದಷ್ಟು ವಿಶಾಲವಾದ ಮತ್ತೊಂದು ಚಪ್ಪರ ಸಿದ್ಧಗೊಂಡಿದೆ. ಇದಕ್ಕೆ ಹೊಂದಿಕೊಂಡು ಅನ್ನಛತ್ರವಿದೆ. ನೂರಾರು ನುರಿತ ಅಡುಗೆ ಕಾರ್ಮಿಕರು ವಿವಿಧ ಭಕ್ಷ್ಯ ತಯಾರಿಯಲ್ಲಿ ನಿರತರಾಗಿದ್ದಾರೆ. ಇಲ್ಲಿನ ಬ್ರಹ್ಮಕಲಶೋತ್ಸವದ ಎಲ್ಲ ಒಂಬತ್ತು ದಿನವೂ ಲಡ್ಡು, ಮೈಸೂರುಪಾಕು, ಕಡಿ ಮೊದಲಾದ ಒಂಬತ್ತು ಬಗೆಯ ಸಿಹಿ ತಿಂಡಿಗಳು ಭಕ್ತರಿಗೆ ಲಭಿಸಲಿದೆ. ಸುಮಾರು 10-15 ಲಕ್ಷ ಜನರು ಇಲ್ಲಿನ ಭಕ್ಷ್ಯ ಭೋಜ್ಯದ ಸ್ವಾದ ಪಡೆಯುವ ನಿರೀಕ್ಷೆ ಇದ್ದು, ಎಲ್ಲವೂ ಅಚ್ಚಕಟ್ಟಾಗಿ ನಡೆಯುತ್ತಿದೆ. ಅಡುಗೆ ಭಟ್ಟರು ಹಗಲುರಾತ್ರಿಯೆನ್ನದ ಕಾರ್ಯ ನಿರತರಾಗಿದ್ದಾರೆ.

ಮಾ. 4ರಿಂದ ದೇವಳಕ್ಕೆ ಎಲ್ಲೆಡೆಯಿಂದ ವಿವಿಧ ಕಡೆಗಳಿಂದ ಹೊರೆ ಕಾಣಿಕೆ ಬರಲಿದೆ. ಇದಕ್ಕಾಗಿ ದೇವಳದ ಬಳಿ ಮತ್ತೊಂದು ಪ್ರತ್ಯೇಕ ವಿಶಾಲ ಉಗ್ರಾಣ ನಿರ್ಮಿಸಲಾಗಿದೆ. ಸಂಗೀತ ಮತ್ತಿತರ ಸಣ್ಣಪುಟ್ಟ ಕಾರ್ಯಕ್ರಮಗಳಿಗಾಗಿ ದೇವಸ್ಥಾನದ ಎದುರಿನಲ್ಲಿ ಶ್ರೀ ದುರ್ಗಾಪರಮೇಶ್ವರಿ ವೇದಿಕೆ ಸಿದ್ಧಗೊಂಡಿದೆ.

ಅತ್ತ 18 ಲಕ್ಷ ರೂ ವೆಚ್ಚದಲ್ಲಿ ದೇವಸ್ಥಾನಕ್ಕಾಗಿ ಒದಗಿಸಲಾದ ಶಾಸ್ವತ ನೀರಿನ ವ್ಯವಸ್ಥೆಯೂ ಮಾ. 3ರಂದು ಬೆಳಿಗ್ಗೆ ಉದ್ಘಾಟನೆಗೊಂಡಿತು. ಆರೋಗ್ಯ, ಪೊಲೀಸ್, ಮೆಸ್ಕಾಂ ಇಲಾಖೆ ಹಾಗೂ ಇತರ ಇಲಾಖೆಗಳ ಸಿಬ್ಬಂದಿ ವರ್ಗದ ತಮ್ಮದೇ ಶೈಲಿಯ ಸೇವೆಗೆ ಸಿದ್ಧತೆ ನಡೆಸಿವೆ.

ಗುರುಪುರ ಕೈಕಂಬ ಜಂಕ್ಷನಿನಲ್ಲಿ ರಸ್ತೆಯುದ್ದಕ್ಕೂ ರಂಗುರಂಗಿನ ಸೀರೆಗಳು ಹಾಗೂ ಕೇಸರಿ ಧ್ವಜ, ಬ್ಯಾನರುಗಳಿಂದ ಸಿಂಗರಿಸಲಾಗಿದ್ದು, ವಾಹನಿಗರೆಲ್ ಇತ್ತ ನೋಡುವಂತಿದೆ. ಪೊಳಲಿವರೆಗಿನ ಈ ದೃಶ್ಯ ಬ್ರಹ್ಮಕಲಶೋತ್ಸವ ಮುಗಿದ ಬಳಿಕ ಆರಂಭಗೊಳ್ಳಲಿರುವ ಪೊಳಲಿಯ ವಾರ್ಷಿಕ ಜಾತ್ರೆಯವರೆಗೂ ಕಂಗೊಳಿಸಲಿದೆ.

By suddi9

Leave a Reply

Your email address will not be published. Required fields are marked *