ಪೊಳಲಿ: ಜೋಗಿ ಸಮಾಜ ಬಾಂಧವರು ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿರುವ ಶ್ರೀಕ್ಷೇತ್ರಪಾಲ ದೇವರ ಗುಡಿಯ ದ್ವಾರಕ್ಕೆ ಸುಮಾರು 9 ಲಕ್ಷ ರೂ. ಮೌಲ್ಯದ ರಜತ ಕವಚ ಹೊದಿಕೆಯ ಸಮರ್ಪಣಾ ಸಮಾರಂಭ ಫೆ.28ರ ಗುರುವಾರ ನಡೆಯಲಿದೆ. ಶ್ರೀಕ್ಷೇತ್ರ ಕದ್ರಿ ಜೋಗಿ ಮಠದ ಮಠಾದಿಪತಿ ಪರಮ ಮೂಜ್ಯ ಶ್ರೀ ಯೋಗಿರಾಜ ನಿರ್ಮಲನಾಥ್ ಮಹಾರಾಜ್ ಇವರ ಮಾರ್ಗದರ್ಶನದಲ್ಲಿ ಹಾಗು ಮಟ್ಟಿ ಶ್ರೀ ಕಾಲಭೈರವ ಮಂಜುನಾಥ ದೇವಸ್ಥಾನದ ಪ್ರಧಾನ ಅರ್ಚಕರಾದ ಉಮೇಶ್‍ನಾಥ್ ಕದ್ರಿ ಇವರ ಉಪಸ್ಥಿತಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಶ್ರೀ ಕಾಲಭೈರವ ಮಂಜುನಾಥ ದೇವಸ್ಥಾನ ಜೋಗಿಮಠ ಮಳಲಿ ಇಲ್ಲಿಂದ ವಾಹನ ಜಾಥಾದ ಮೂಲಕ ಕೈಕಂಬ ಪೇಟೆಯಾಗಿ ಪೊಳಲಿ ದೇವಸ್ಥಾನದವರೆಗೆ ಭವ್ಯಮೆರವಣಿಗೆಯೊಂದಿಗೆ ಶ್ರೀಕ್ಷೇತ್ರಕ್ಕೆ ಸಮರ್ಪಿಸಲಾಗುವುದು. ಸರ್ವ ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ  ತಿಳಿಸಿದೆ.

By suddi9

Leave a Reply

Your email address will not be published. Required fields are marked *