ಬೆಳ್ಳೂರು:ಶ್ರೀ ಕಾವೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವ ಫೆಬ್ರವರಿ 18 ಸೋಮವಾರದಿಂದ ಫೆ.22 ರ ಶುಕ್ರವಾರದವರೆಗೆ ಶ್ರೀ ಕಾವೇಶ್ವರ ದೇವಸ್ಥಾನದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಉದಯ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ದೇವತಾ ಪ್ರಾರ್ಥನೆ, ನವಕ ಕಲಶ, -ಪ್ರಧಾನಹೋಮ, ಮಧ್ಯಾಹ್ನ 12.30ಕ್ಕೆ ಮಃಅಪೂಜೆ ಅನ್ನ ಸಂತರ್ಪಣೆ ಸಂಜೆ 4 ಗಂಟೆಗೆ ಕೋಳಿಕುಂಟ,ಸಂಜೆ ಗಂಟೆ 4 ರಿಂದ ಶ್ರೀ ಕಾವೇಶ್ವರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ 6 ಗಂಟೆಗೆ ಪ್ರಾರ್ಥನೆ ದೇವರನ್ನು ಆಹ್ವಾನಿಸಿ ಜ್ಯೋತಿಯೊಂದಿಗೆ ಕ್ಷೇತ್ರಕ್ಕೆ ಆಗಮಿಸಿ ಪ್ರಧಾನ ದೀಪ ಹಚ್ಚುವುದು. ಶಮಜೆ 6 ಗಂಟೆಯಿಂದ ಯಕ್ಷಕಲಾ ಸಂಘ ವರಕೋಡಿ , ಯಕ್ಷಧಾಮ ಇದರ ಬಾಲ ಕಲಾವಿದರಿಂದ ಯಕ್ಷಗಾನ ಬಯಲಾಟ ಯಾಗ ಸಂರಕ್ಷಣೆ-ಇಂದ್ರಜಿತು. ರಾತ್ರಿ ಗಂಟೆ 7 ಕ್ಕೆ ಭಂಡಾರ ಮನೆಯಿಂಧ ಭಂಡಾರ ಬರುವುದು ರಾತ್ರಿ ಗಂಟೆ 9 ಕ್ಕೆ ಧ್ವಜರೋಹಣ , ಉತ್ಸವ ಬಲಿ, ಕಂಚಿಲ ಸೇವೆ ನಡೆಯಲಿದೆ ಎಂದು ಶ್ರೀ ಕಾವೇಶ್ವರ ದೇವಳದ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *