ಬೆಂಗಳೂರು: ರಾಜ್ಯದ ಇತಿಹಾಸದಲ್ಲೇ ಮೊದಲಬಾರಿಗೆ ಶಾಸಕರುಗಳಿಗೆ ಬಜೆಟ್ನ ಪ್ರತಿ ನೀಡದೇ ಮುಖ್ಯಮಂತ್ರಿ ಅವರು ಬಜೆಟ್ ಮಂಡಿಸಿದ್ದಾರೆ. ಬಜೆಟ್ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ. ೨ ದಿನಗಳ ಹಿಂದೆಯೇ ಪ್ರತಿಪಕ್ಷದ ನಾಯಕರಾದ ಯಡಿಯೂರಪ್ಪರವರು, ಬಜೆಟ್ನ ಪ್ರತಿಯನ್ನು ಶಾಸಕರಿಗೆ ನೀಡಿ ಈ ಹಿಂದಿನ ಸಂಪ್ರದಾಯವನ್ನು ಮುಂದುವರಿಸಬೇಕಲ್ಲದೆ ಬಜೆಟ್ ಮಂಡನೆಗೆ ಪ್ರತಿಪಕ್ಷವು ಸಂಪೂರ್ಣ ಸಹಕಾರ ನೀಡುವುದಾಗಿಯೂ ತಿಳಿಸಿದ್ದರು.
ಆದರೆ, ಬಜೆಟ್ ಮಂಡನೆಗೆ ಮುನ್ನ ಮುಖ್ಯಮಂತ್ರಿ ಅವರು ಪತ್ರಿಕಾಗೋಷ್ಠಿ ಕರೆದು ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಿ, ಗೊಂದಲವನ್ನು ಸೃಷ್ಠಿಸಿದ್ದಾರೆ. ಆಡಳಿತ ಪಕ್ಷದಲ್ಲಿ ಸಂಖ್ಯಾಬಲ ಕಡಿಮೆಯಿರುವುದರಿಂದ ಸದನದಲ್ಲಿ ಪ್ರತಿಪಕ್ಷಗಳಿರಬಾರದೆಂದು, ಮುಖ್ಯಮಂತ್ರಿಯವರು ಈ ಸುಳ್ಳು ಆರೋಪ ಹೊರಿಸಿ ಗೊಂದಲ ಸೃಷ್ಠಿಸಿದ್ದಾರೆ. ಹಾಗಾಗಿ ನಾವು ಸಭಾತ್ಯಾಗ ಮಾಡಿ ಗಾಂಧಿ ಪ್ರತಿಮೆ ಎದುರು ಧರಣಿ ಕುಳಿತರಿಂದ ಸಂಜೆಯವರೆಗೂ ಬಜೆಟ್ನ ಪ್ರತಿ ಸಿಗಲಿಲ್ಲ.
ಯು.ರಾಜೇಶ್ ನಾಯ್ಕ್, ಶಾಸಕರು ಬಂಟ್ವಾಳ

