ಸಮುದಾಯದ ಪಾಲ್ಗೋಳುವಿಕೆ ಅತ್ಯಗತ್ಯ:- ಸಂಜೀವ ಮಠಂದೂರು
ಚಂದಳಿಕೆ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ರಂಗ ಮಂದಿರದಲ್ಲಿ ನಡೆದ 60ರ ಸಂಭ್ರಮದ ವಜ್ರಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಸಂಜೀವ ಮಠಂದೂರುರವರು ಊರಿನವರು ಹಾಗೂ ಸಂಘ ಸಂಸ್ಥೆಗಳು ಶಾಲೆಯ ಅಭಿವೃಧ್ದಿಯಲ್ಲಿ ಕೈ ಜೋಡಿಸಿದರೆ ಸರಕಾರಿ ಶಾಲೆಗಳು ಇನ್ನಷ್ಟು ಬೆಳವಣಿಗೆಗೆ ಕಾರಣವಾಗಬಹುದು ಈ ಸಮುದಾಯ ಪಾಲ್ಗೋಳುವಿಕೆ ಅತ್ಯಗತ್ಯ ಎಂದರು.ಶಾಸಕರ ಅನುದಾನದಿಂದ ಶಾಲೆಯ ಮುಖ್ಯದ್ವಾರ ಮಾರ್ಗ ಇಂಟರ್‍ಲಾಕ್ ಜೆ.ಎಸ್.ಡಬ್ಲು ಸಿಮೆಂಟ್ ಲಿಮಿಟೆಡ್‍ನವರು ಕೊಡುಗೆಯಾಗಿ ನೀಡಿದ ಸುಸಜ್ಜಿತವಾದ ಕೊಠಡಿ ಯುನೈಟೆಡ್ ಇಂಡಿಯಾ ಇನ್ಸುರೇನ್ಸ್ ಕಂಪನಿಯವರು ಕೊಡುಗೆಯಾಗಿ ನೀಡಿದ ಆಧುನಿಕರಿಸಿದ ನಲಿಕಲಿ ಕೊಠಡಿಯನ್ನು ಉದ್ಘಾಟಿಸಿದರು.

KED_1864
ವಿದ್ಯಾವರ್ದಕ ಸಂಘದ ಅಧ್ಯಕ್ಷೆ ಶ್ರೀಮತಿ ಭವಾನಿ ರೈ ಕೊಲ್ಯ ಸ್ವಾಗತಿಸಿದರು ಜೆ.ಎಸ್.ಡಬ್ಲುಸಿಮೆಂಟ್ ಲಿಮಿಟೆಡ್‍ನ ಮ್ಯಾನೆಜರ್ ವಿನೋದ್ ನಾಯಕ್‍ರನ್ನು ಇನ್ಸುರೇನ್ಸ್ ಕಂಪನಿಯ ಶ್ರಿಮುನಿರಾಜ್‍ರನ್ನು ಶಾಲೆಯ ಪರವಾಗಿ ಗೌರವಿಸಲಾಯಿತು ಇದೇ ಸಂದರ್ಭದಲ್ಲಿ ಜೆ.ಎಸ್.ಡಬ್ಲು ಕೊಠಡಿ/ ನಲಿಕಲಿ ಕೊಠಡಿ ಆಧುನಿಕರಣದ ಕೊಡುಗೆಯಲ್ಲಿ ಶಾಲೆಯನ್ನು ಉಳಿಸಿ ಬೆಳೆಸಲು ಪ್ರಮುಖ ಪಾತ್ರ ವಹಿಸಿದ ಶ್ರೀನಿವಾಸ ಶಿಲ್ಪಾ ಪರ್ನಿಚರ್ ಇವರನ್ನು ಶಾಲೆಯ ಪರವಾಗಿ ಗೌರವಿಸಲಾಯಿತು. ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರಿ ಅರುಣ್ , ಅತಿಥಿಗಳಾಗಿ ಶ್ರಿ ಕೆ.ಮಂಜುನಾಥ ಕಲ್ಲಕಟ್ಟ ಸದಸ್ಯರು ಪಟ್ಟಣ ಪಂಚಾಯತ್ ವಿಟ್ಲ, ಶ್ರೀ ಯತೀಶ್ ಎಂ ಅಸಿಸ್ಟೆಂಟ್ ಮ್ಯಾನೆಜರ್ ಜೆ.ಎಸ್.ಡಬ್ಲು ಸಿಮೆಂಟ್,ಶ್ರೀ ಯೋಗಾನಂದ ಇಂಜಿನಿಯರ್ ಜೆ.ಎಸ್.ಡಬ್ಲು ಸಿಮೆಂಟ್, ಶ್ರೀ ಸುಬ್ರಾಯ ಪೈ ಉದ್ಯಮಿಗಳು ವಿಟ್ಲ, ಶ್ರೀ ಜಿ.ಸುಂದರ್ ರಾಮನ್ ಡೆಪ್ಯುಟಿ ಜನರಲ್ ಮೇನೆಜರ್,ಶ್ರೀ ವಿ ಪದ್ಮನಾಭ ನ್ಯಾಕ್ ಡಿವಿಜನಲ್ ಮೇನೆಜರ್ ಯುನೈಟೆಡ್ ಇಂಡಿಯಾ ಇನ್ಸೂರೇನ್ಸ್ ಕಂಪನಿ,ಶ್ರೀ ವಿ. ಚಂದ್ರಶೇಖರ ಶೆಟ್ಟಿ ಬ್ರಾಂಚ್ ಮೆನೆಜರ್ ಪುತ್ತೂರು ಯುನೈಟೆಡ್ ಇಂಡಿಯಾ ಇನ್ಸೂರೇನ್ಸ್ ಕಂಪನಿ,ಶ್ರೀ ದೇಜಪ್ಪ ಪೂಜಾರಿ ನಿಡ್ಯ ಉದ್ಯಮಿಗಳು ಚಂದಳಿಕೆ, ಶ್ರೀ ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಚಂದಳಿಕೆ ಶ್ರೀ ಗಣಪತಿ ಸಿ ಅಭಿವೃದ್ಧಿ ಅಧಿಕಾರಿ ಶ್ರೀ ಅಮ್ಮು ಶೆಟ್ಟಿ ಗೌರವಾಧ್ಯಕ್ಷ.
ಇದೇ ಸಂದರ್ಭದಲ್ಲಿ 1 ಹಾಲ್ 2ಕೊಠಡಿಗಳಿಗೆ ಪೂರ್ಣ ಟೈಲ್ಸ್ ಅಳವಡಿಸಲು ಆರ್ಥಿಕ ಸಹಕಾರ ನೀಡಿದ ಶ್ರೀ ದೇಜಪ್ಪ ಪೂಜಾರಿ ಉದ್ಯಮಿಗಳು ವಿಟ್ಲ, ಶ್ರೀಮತಿ ಭವಾನಿ ರೈ ಕೊಲ್ಯ, ಶ್ರಿ ಗಂಗಾಧರ ಭವಾನಿ ಸೆನಿಟರಿ, ಶ್ರೀನಿವಾಸ ಶಿಲ್ಪ ಪರ್ನಿಚರ್, ಶ್ರೀ ನರೇಂದ್ರ .ಸಿ ಶಿಲ್ಪ ಪರ್ನಿಚರ್ ಮುಖ್ಯದ್ವಾರ ಗೇಟ್ ಅಳವಡಿಸಿದ ಎಸ್‍ಡಿಎಮ್‍ಸಿ ಅಧ್ಯಕ್ಷರಾದ ಶ್ರೀ ನಾರಾಯಣ ಪೂಜಾರಿ ಸ್ಮರಣಿಕೆ ನೀಡಿ ಗೌರವಿಸಲಾಯಿತು ಹಾಗೇ ವಿದ್ಯಾವರ್ಧಕ ಸಂಘದ ಸದಸ್ಯರಾದ ಶ್ರೀ ಸಂಜೀವ ಪೂಜಾರಿ ಭಾರತ್ ಶಾಮಿಯಾನ್ ವಿಟ್ಲ ಸ್ಪಿಚ್ ಸ್ಟಾಂಡ್‍ನ್ನು ನೆರವೆರಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವಿಶ್ವನಾಥ ಗೌಡ ಕುಳಾಲು ವರದಿಯಾಚಿಸಿ ಧನ್ಯವಾದವಿತ್ತರು ಶ್ರೀಮತಿ ಪುಷ್ಪಾವತಿ ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕಿ ಶ್ರೀಮತಿ ಕಸ್ತೂರಿ ಹಾಗೂ ಪ್ರಸನ್ನ ಬಹುಮಾನ ವಿತರಿಸಲು ಸಹಕರಿಸಿದರು ಬಳಿಕ ಹಿರಿಯ ವಿದ್ಯಾರ್ಥಿ ಸಂಘ ಚಂದಳಿಕೆ ವತಿಯಿಂದ ಶ್ರೀ ಭವಾನಿ ಸೆನಿಟರಿ ಶ್ರೀಗಂಗಾಧರ ಪ್ರಾಯೋಜಕತ್ವದಲ್ಲಿ ಶ್ರೀ ಚಂದ್ರಶೇಖರ ಪುತ್ತೂರು ಸಾರಥ್ಯದಲ್ಲಿ ಸುಸ್ವರ ಮತ್ತು ಇವೆನ್ಟ್ಸ್ ಆರ್ಕೆಸ್ಟ್ರ ನಡೆಯಿತು.

By Suddi9

Leave a Reply

Your email address will not be published. Required fields are marked *