ಮೂಡುಬಿದಿರೆ: ಕಲೆ ಮತ್ತು ಸಂಗೀತ ಕ್ಷೇತ್ರದಲ್ಲಿ ತಾಳ, ರಾಗ, ನಾದಗಳ ಒಗ್ಗೂಡುವಿಕೆಯಿಂದ ಸಂಗೀತ ಸಂಪೂರ್ಣಗೊಳ್ಳುತ್ತದೆ. ಕಲಾಸಾಹಿತ್ಯ, ಸಂಗೀತದಿಂದ ಜನಸಾಗರವನ್ನು ಒಂದುಗೂಡಿಸಿ, ಜನರಲ್ಲಿ ಸಾಮರಸ್ಯ ಮೂಡಿಸಿ, ರಸಭೋಜನವನ್ನು ಆಳ್ವಾಸ್ ಸಂಸ್ಥೆ ನೀಡುತ್ತಿದೆ ಎಂದು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.

virasath udgatane (14)
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಪುತ್ತಿಗೆ ಪುತ್ತಿಗೆ ವಿವೇಕಾನಂದ ನಗರದ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗವೇದಿಕೆಯಲ್ಲಿ ಮೂರು ದಿನಗಳ ಕಾಲ ನಡೆಯುವ 25ನೇ ಆಳ್ವಾಸ್ ವಿರಾಸತ್ 2019 ರಾಷ್ಟ್ರೀಯ ಸಾಂಸ್ಕøತಿಕ ಉತ್ಸವದ ರಜತ ಮಹೋತ್ಸವವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

virasath udgatane (8)
ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಕೂಡ, ಯೋಗ, ಆದ್ಯಾತ್ಮ ಸಂಸ್ಕøತಿಯು ಪಶ್ಚಿಮದ ಕಡೆ ಸಾಗುತ್ತಿದೆ. ಆದರೆ ರಾಹು ಕೇತುವಿನಂತೆ ವಿಕೃತಿಯನ್ನು ಪಶ್ಚಿಮದಿಂದ ಪೂರ್ವಕ್ಕೆ ಬರಮಾಡಿಕೊಂಡು ನಮ್ಮಲ್ಲಿ ಹಲವೆಡೆ ಅನುಸರಿಸುತ್ತಿರುವುದು ಖೇದಕರ ಎಂದು ಹೇಳಿದರು.

virasath udgatane (1)
ನಿಟ್ಟೆ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಡಾ. ವಿನಯ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಳ್ವಾಸ್‍ನ ಪ್ರತಿಯೊಂದು ಕಾರ್ಯಕ್ರಮವು ಕಲ್ಪನೆಯನ್ನು ಮನಸಿನಲ್ಲಿಟ್ಟುಕೊಂಡು ಉತ್ತಮವಾಗಿ ಮುನ್ನಡೆಸುತ್ತಿದೆ. ರಾಜ್ಯ ಹಾಗೂ ಹೊರರಾಜ್ಯದಲ್ಲಿ ಆಳ್ವಾಸ್ ಹೆಸರುವಾಸಿಯಾಗಿದೆ. ಸಮಾಜಕ್ಕೆ ಎದ್ದು ಕಾಣುವ ಮನೋಭಾವ ಇರುವ ಮಾದರಿ ವ್ಯಕ್ತಿ ಮೋಹನ್ ಆಳ್ವ ಆಗಿದ್ದಾರೆ. ಕನ್ನಡ ಮಾಧ್ಯಮ ನಶಿಸಿ ಹೋಗುವ ಸಂದರ್ಭದಲ್ಲಿ ಒಂದುಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸೌಲಭ್ಯವನ್ನು ಆಳ್ವಾಸ್ ಸಂಸ್ಥೆ ನೀಡುತ್ತಿದೆ ಎಂದು ಶ್ಲಾಘಿಸಿದರು.

virasath udgatane (15)
ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ ಕಾರ್ಯಕ್ರಮವನ್ನು sಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿ, ಜಾನಪದ ಕಲೆಯನ್ನು ಸಂಪೂರ್ಣವಾಗಿ ಜನರಿಗೆ ಪರಿಚಯಿಸುವ ಕೆಲಸ ಸಂಸ್ಥೆಯಿಂದ ನಡೆಯುತ್ತಿದ್ದು, ಎಲ್ಲಾ ರೀತಿಯ ಕಲೆಯ ಅನಾವರಣಕ್ಕೆ ಅವಕಾಶ ನೀಡಲಾಗುತ್ತಿದೆ. ವಿರಾಸತ್‍ನಲ್ಲಿ ಮೂಡಿ ಬರುವ ಸಾಂಸ್ಕøತಿಕ ಸೊಬಗನ್ನು ಕೇವಲ ಮನೋರಂಜನೆಯಾಗಿ ನೋಡದೆ, ಸೌಂದರ್ಯ ಪ್ರಜ್ಞೆಯನ್ನು ಪ್ರೇಕ್ಷಕರು ಹಾಗೂ ವಿದ್ಯಾರ್ಥಿಗಳು ಬೆಳೆಸಬೇಕು. ಅನೇಕ ಯುವಜನರು ಕಲೆಗೆ ಆಸಕ್ತಿ ನೀಡಿ, ಅವರಿಗೆ ಬೇಕಾದ ಸೂಕ್ತ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ “ವಿಶೇಷ ಅಂಚೆ ಲಕೋಟೆ” ಬಿಡುಗಡೆ ಮಾಡಲಾಯಿತು.

virasath udgatane (5)
ವೇದಿಕೆಯಲ್ಲಿ ಶಾಸಕ ಎ.ಉಮನಾಥ ಕೋಟ್ಯಾನ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಮಾಜಿ ಸಚಿವ ಅಮರನಾಥ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಅಧ್ಯಕ್ಷ ಡಾ.ಎಂ ಎನ್. ರಾಜೇಂದ್ರ ಕುಮಾರ್, ಮಂಗಳೂರು ಕೆನರಾ ಮಹಾಪ್ರಬಂಧಕರಾದ ಎಂ.ಲಕ್ಷಿಂ ನಾರಾಯನ್, ರವೀಂದ್ರ ಆಳ್ವ, ಕೆ.ಶ್ರೀಪತಿ ಭಟ್, ಸುರೇಶ್ ಬಂಡಾರಿ, ಸುರೇಶ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಮುಸ್ತಾಫ ಎಸ್, ಉದಯ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಜಯಶ್ರೀ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು.

virasath udgatane (11)

ಕಾರ್ಯಕ್ರಮವನ್ನು ಉಪನ್ಯಾಸಕಿ ದೀಪಾ ಕೊಟಾರಿ ನಿರೂಪಿಸಿದರು. ಆಳ್ವಾಸ್ ಸಂಸ್ಥೆಯ ಪಿಆರ್‍ಒ ಡಾ. ಪದ್ಮನಾಭ ಶೆಣೈ ಪ್ರಶಸ್ತಿ ಪತ್ರ ವಾಚಿಸಿದರು. ಉದ್ಘಾಟನಾ ಸಮಾರಂಭದ ಮೊದಲು ಆಳ್ವಾಸ್ ಸಾಂಸ್ಕøತಕ ತಂಡದ ವಿದ್ಯಾರ್ಥಿಗಳು ಹಾಗೂ ವಾದ್ಯ ವೃಂದ ಮೆರವಣಿಗೆಯ ಮೂಲಕ ಗಣ್ಯರನ್ನು ಸ್ವಾಗತಿಸಿದರು.

virasath udgatane (10)

By Suddi9

Leave a Reply

Your email address will not be published. Required fields are marked *