ಮೂಡುಬಿದಿರೆ: ಇಲ್ಲಿನ ಕಾಲೇಜೊಂದರ ವಿದ್ಯಾರ್ಥಿಯೋರ್ವ ನಾಪತ್ತೆಯಾಗಿದ್ದಾನೆ. ಈತ ಪ್ರಥಮ ಬಿಕಾಂ ವಿದ್ಯಾರ್ಥಿಯಾಗಿದ್ದು, ಹಾಸ್ಟೆಲ್ನಿಂದ ಕಳೆದ ಡಿ18ರಿಂದ ನಾಪತ್ತೆಯಾಗಿದ್ದಾನೆ.
ಇಲ್ಲಿನ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿ ಸುದೈವ (19 ವರ್ಷ) ಹಾಸ್ಟೆಲ್ನಿಂದ ರಾತ್ರಿ 9.30 ಹೊರಗೆ ತೆರಳಿದವರು ಕಾಲೇಜಿಗೂ ಬಾರದೇ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ. ಬೆಂಗಳೂರು ಮೂಲದ ಕಲಕಪ್ಪ ಶಿವರುದ್ರಪ್ಪ ಮುದಿಗೌಡರ್ ಪುತ್ರ ಸುದೈವ್ 5.6 ಅಡಿ ಎತ್ತರ, ಇಂಗ್ಲೀಷ್, ಹಿಂದಿ, ಕನ್ನಡ ಬಲ್ಲವರಾಗಿದ್ದು ನಾಪತ್ತೆಯಾದಂದು ಕೆಂಪು ಟೀ ಶರ್ಟ್, ನೀಲಿ ಜೀನ್ಸ್ ಧರಿಸಿದ್ದ ಎನ್ನಲಾಗಿದೆ. ಈ ಬಗ್ಗೆ ಮೂಡುಬಿದಿರೆ ಠಾಣೆಗೆ ದೂರು ನೀಡಲಾಗಿದೆ.

