ಮೂಡುಬಿದಿರೆ: ಮೂಡುಬಿದಿರೆಯ ಸಾಂಪ್ರದಾಯಿಕ ಸಂಗೀತ ಜನಪದ ವಾದ್ಯ ಕಲಾವಿದರ ಸಂಘದ 6ನೇ ವಾರ್ಷಿಕ ಮಹಾಸಭೆಯನ್ನು
ಅಲಂಗಾರು ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯಭಟ್ ಅವರು ಸಮಾಜ ಮಂದಿರದಲ್ಲಿ ಉದ್ಘಾಟಿಸಿದರು. ಮಾರೂರು ಖಂಡಿಗ ರಾಮದಾಸ ಆಸ್ರಣ್ಣ ಆಶೀರ್ವಚನ ನೀಡಿದರು.
ಸಂಘದ ಗೌರವಾಧ್ಯಕ್ಷೆ, ಶ್ವೇತಾ ಜೈನ್ ಅಧ್ಯಕ್ಷತೆ ವಹಿಸಿದ್ದರು.

Vaadya Sangha
ಖ್ಯಾತ ಸ್ಯಾಕ್ಸೋಫೆÇೀನ್, ಕ್ಲಾರಿಯೋನೆಟ್ ವಾದಕ ವಿದ್ವಾನ್ ಕಾಸರಗೋಡು ಗಂಗಾಧರ ಅವರನ್ನು ಸನ್ಮಾನಿಸಲಾಯಿತು. ಅನಾರೋಗ್ಯ ಪೀಡಿತರಾಗಿರುವ ವಾದ್ಯ ಕಲಾವಿದ ಕಡಂದಲೆಯ ಕಿಟ್ಟು ಸೇರಿಗಾರ ಅವರಿಗೆ ಸಂಘದ ವತಿಯಿಂದ ಸಹಾಯಧನ ನೀಡಲಾಯಿತು.

ದ.ಕ. ಜಿಲ್ಲಾ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ ಮುಖ್ಯ ಅತಿಥಿಯಾಗಿದರು. ಸಂಘದ ಅಧ್ಯಕ್ಷ ಕೇಶವ ಶೆಟ್ಟಿಗಾರ್, ಕಾರ್ಯದರ್ಶಿ ಗಂಗಾಧರ ಎಡಪದವು, ಕೋಶಾಧಿಕಾರಿ ಸುರೇಶ್ ಕಡಂದಲೆ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶೋಭಾ ಭಾಸ್ಕರ್ ಸ್ವಾಗತಿಸಿದರು. ಕಲಾವಿದ ರಾಜೇಶ್ ಕಡಲಕೆರೆ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ನಾದಸ್ವರ ಇಲೈಮ್ ಚಕ್ರವರ್ತಿ ಶ್ರೀಲಂಕಾ ಪಿ.ಎಸ್. ಬಾಲಮುರುಗನ್, ನಾದಸ್ವರ ಇಸೈಮಾಣಿ ತಿರುಕೊವಿಲೂರ್ ಬಾಲಾಜಿ ಇವರು ನಾದಸ್ವರ ವಾದನವನ್ನು ತವಿಲ್ ಚಕ್ರವರ್ತಿ ಕಲೈಮಾಣಿ ಮಾನ್ನರಗುಡಿ ಡಾ.ವಾಸುದೇವನ್ ಮತ್ತು ತವಿಲ್ ಇಲೈಮ್ ಚಕ್ರವರ್ತಿ ಕಲೈಮಾಣಿ ಕೊವಿಲೂರ್ ಕೆ. ಜಿ. ಕಲ್ಯಾಣಸುಂದರಂ ಇವರ ತವಿಲ್ ಸಾಥಿಯೊಂದಿಗೆ ಪ್ರಸ್ತುತಪಡಿಸಿದರು.

ಸ್ಯಾಕ್ಸೋಫೋನ್

By Suddi9

Leave a Reply

Your email address will not be published. Required fields are marked *