ಮೂಡುಬಿದಿರೆ: ಪುತ್ತಿಗೆ ಗ್ರಾ.ಪಂ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಸುಮಾರು 11 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಗ್ರಾಮ ಲೆಕ್ಕಾಧಿಕಾರಿಯ ನೂತನ ಕಚೇರಿಯನ್ನು ಶಾಸಕ ಉಮಾನಾಥ ಕೋಟ್ಯಾನ್ ಅವರು ಸೋಮವಾರ ಉದ್ಘಾಟಿಸಿದರು.

Puthige VA Office
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಸುಚರಿತ ಶೆಟ್ಟಿ, ಪುತ್ತಿಗೆ ಪಂಚಾಯಿತಿ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಉಪಾಧ್ಯಕ್ಷೆ ಶುಭಾ ಆರ್. ಹೆಬ್ಬಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ತಹಸೀಲ್ದಾರ್ ಗುರುಪ್ರಸಾದ್, ಚೌಟರ ಅರಮನೆಯ ಕುಲದೀಪ್, ಪಿಡಬ್ಲ್ಯೂಡಿ ಇಂಜಿನಿಯರ್ ಜಗದೀಶ್ ಶೇಟ್, ಕಂದಾಯ ನಿರೀಕ್ಷಕ ಹಾರಿಸ್, ಪುತ್ತಿಗೆ ಗ್ರಾ.ಪಂ. ಪಿಡಿಒ ಸುನೀತಾ ಸಾಲ್ಯಾನ್, ಹೊಸಬೆಟ್ಟು ಗ್ರಾ.ಪಂ. ಪಿಡಿಒ ಮಾರ್ಷಲ್ ಡಿ’ಸೋಜಾ ಹಾಗೂ ಗ್ರಾ.ಪಂ. ಸದಸ್ಯರು ಭಾಗವಹಿಸಿದರು.
ಕಾರ್ಯಕ್ರಮವನ್ನು ಗ್ರಾಮ ಲೆಕ್ಕಾಧಿಕಾರಿ ಗೋಪಾಲ್ ಸ್ವಾಗತಿಸಿದರು. ಗ್ರಾ.ಪಂ. ಸದಸ್ಯ ಶಶಿಧರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ನಾಗವರ್ಮ ಜೈನ್ ವಂದಿಸಿದರು.

By suddi9

Leave a Reply

Your email address will not be published. Required fields are marked *