ಮೂಡುಬಿದಿರೆ: ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ವತಿಯಿಂದ ಇಲ್ಲಿನ ಕಡಲಕೆರೆ ವೀರರಾಣಿ ಅಬ್ಬಕ್ಕ ಸಂಸ್ಕøತಿ ಗ್ರಾಮದಲ್ಲಿ ಶನಿವಾರ ಹಾಗೂ ಭಾನುವಾರ 16ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳೋತ್ಸವವು ನಡೆಯಿತು. ಇದರಲ್ಲಿ ಹಲವು ಭಾಗದ ಕೋಣಗಳು ಭಾಗವಹಿಸಿದ್ದು, ವಿವಿಧ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಅದರಂತೆ ಕೋಣಗಳು ಪ್ರಶಸ್ತಿಯನ್ನು ಪಡೆದುಕೊಂಡಿತು.

ಕಂಬಳ ಕೂಟದ ಫಲಿತಾಂಶಗಳು
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
ಕನೆಹಲಗೆ: 3 ಜೊತೆ, ಅಡ್ಡಹಲಗೆ: 4 ಜೊತೆ, ಹಗ್ಗ ಹಿರಿಯ: 20 ಜೊತೆ, ನೇಗಿಲು ಹಿರಿಯ: 26 ಜೊತೆ, ಹಗ್ಗ ಕಿರಿಯ: 14 ಜೊತೆ, ನೇಗಿಲು ಕಿರಿಯ: 75 ಜೊತೆ ಒಟ್ಟು 142 ಜೊತೆ ಕೋಣಗಳು ಭಾಗವಹಿಸಿದ್ದವು.
ಕನೆಹಲಗೆವಿಭಾಗದಲ್ಲಿ ಬಾರ್ಕೂರು ಶಾಂತಾರಾಮ ಶೆಟ್ಟಿ ಪ್ರಥಮ ಸ್ಥಾನ ಪಡೆದುಕೊಂಡರೆ, ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಹಗ್ಗ ಹಿರಿಯ: ಮೂಡಬಿದ್ರಿ ನಿವ್ ಪಡಿವಾಲ್ಸ್ ಹಾರ್ದಿಕ್ ಹರ್ಷವರ್ಧನ್ ಪಡಿವಾಲ್ಸ್ ಪ್ರಥಮ ಸ್ಥಾನ. ಮೂಡಬಿದ್ರಿ ಕರಿಂಜೆ ವಿನು ವಿಶ್ವನಾಥ ಶೆಟ್ಟಿ ದ್ವಿತೀಯ ಸ್ಥಾನ.
ಹಗ್ಗ ಕಿರಿಯ: ಕಾಂತಾವರ ಅಂಬೋಡಿಮಾರ್ ರಘನಾಥ ದೇವಾಡಿಗ “ಂ” ಪ್ರಥಮ ಹಾಗೂ ಕಾಂತಾವರ ಅಂಬೋಡಿಮಾರ್ ರಘನಾಥ ದೇವಾಡಿಗ ದ್ವಿತೀಯ ಸ್ಥಾನ.
ನೇಗಿಲು ಹಿರಿಯ: ಬೋಳದ ಗುತ್ತು ಸತೀಶ್ ಶೆಟ್ಟಿ ಪ್ರಥಮ ಸ್ಥಾನ. ಸಾಣೂರು ಸುಂದರ ಕೆ. ಆಚಾರ್ಯ ದ್ವಿತೀಯ ಸ್ಥಾನ.
ನೇಗಿಲು ಕಿರಿಯ: ಅಳಿಯೂರು ಮಿತ್ತೊಟ್ಟು ಸೀತಾರಾಮ ಆನಂದ ಶೆಟ್ಟಿ ಪ್ರಥಮ ಹಾಗೂ ಮೇರಮಜಲ್ ಮಿಷನ್ ಗೋಡ್ವಿನ್ ವೆಲ್ವಿನ್ ವಾಸ್ ದ್ವಿತೀಯ ಸ್ಥಾನ.
ಅಡ್ಡಹಲಗೆ: ಬೋಳಾರ ತ್ರಿಶಾಲ್ ಪೂಜಾರಿ ಪ್ರಥಮ ಹಾಗೂ ಹಂಕರಜಾಲು ಮೋಹನದಾಸ್ ಭಿರ್ಮಣ್ಣ ಶೆಟ್ಟಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಚಿತ್ರ ಕೃಪೆ: ಮಾನಸ ಸ್ಟುಡಿಯೋ



