ಮೂಡುಬಿದಿರೆ: ಇಲ್ಲಿನ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ತಮ್ಮ ನೇಪಾಳ ಪ್ರವಾಸ ಸಂದರ್ಭ ಕಾಟ್ಮಂಡುವಿನ ಪಶುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.

jain swamiji at nepal (3)
ಹೆಬ್ರಿಯ ಒಟ್ಟು 5 ಜನ ಅರ್ಚಕರಿದ್ದು ವಿಟ್ಲ ,ಭಟ್ಕಳ ಸಹಿತ ಕರ್ನಾಟಕ ಕರಾವಳಿಯ ಪುರೋಹಿತರೇ ಇಲ್ಲಿ ಶಂಕರ ಅಚಾರ್ಯರ ಕಾಲದಿಂದ ನಿಯುಕ್ತಿಗೊಂಡು ನಿಷ್ಠೆಯಿಂದ ತ್ರಿಕಾಲ ಪೂಜೆ ನೆರವೇರಿಸುತ್ತಾರೆ ಎಂದು ಸ್ವಾಮೀಜಿಯವರು ತಮ್ಮ ಪ್ರವಚನ ಸಂದರ್ಭ ತಿಳಿಸಿದರು.

jain swamiji at nepal (2)
ಸ್ವಾಮೀಜಿಯವರನ್ನು ದೇವಸ್ಥಾನದ ಪ್ರಮುಖರಾದ ರಾವಲ್ ಗಣೇಶ್ ಭಟ್ಟ ಸ್ವಾಗತಿಸಿದರು. ನೇಪಾಳ ದಿಗಂಬರ ಜೈನ ಸಮಾಜದ ಅಧ್ಯಕ್ಷ ಪಂಕಜ್ ಜೈನ ,ಸುಬಾಶ್ ಸೇಠಿ, ಮುನೇಶ್ ಗಂಗವಾಲ್,ನವನೀತ್ ,ಸುಮೀತ್, ಶಿಲ್ಪಿ ಪಂಕಜ್ ಸ್ವಾಗತಿಸಿದರು.

jain swamiji at nepal (1)
2000 ಹಾಗೂ 2007ರಲ್ಲಿ ಕಾಟ್ಮಂಡು ಜಿನ ಮಂದಿರ ಹಾಗೂ ಪಶುಪತಿ ನಾಥ ದೇಗುಲಕ್ಕೆ ಭೇಟಿ ನೀಡಿರುವ ಭಟ್ಟಾರಕಶ್ರೀ
ನ.26ರಿಂದ ಡಿ.3ರವರೆಗೆ ನೇಪಾಳದಲ್ಲಿ ಧಾರ್ಮಿಕ ಪ್ರವಾಸಗೊಂಡಿದ್ದಾರೆ.

By Suddi9

Leave a Reply

Your email address will not be published. Required fields are marked *