ಮೂಡುಬಿದಿರೆ : ಪದವಿಪೂರ್ವ ಶಿಕ್ಷಣ ಇಲಾಖೆ, ಮೈಸೂರು ಹಾಗೂ ವಿಜಯ ವಿಠಲ ಪ.ಪೂ ಕಾಲೇಜು, ಮೈಸೂರು ಇವರ ಆಶ್ರಯದಲ್ಲಿ ನವೆಂಬರ್ 24 ರಿಂದ 26 ರವರೆಗೆ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಪ್ರಾಬಲ್ಯವಿರುವ ದ.ಕ ಜಿಲ್ಲಾ ತಂಡ ಬಾಲಕರು, ಬಾಲಕಿಯರ ವಿಭಾಗದಲ್ಲಿ ಅಗ್ರಸ್ಥಾನದ ಜತೆಗೆ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

alvas pu sports (2)

ಆಳ್ವಾಸ್ ಕ್ರೀಡಾಪಟುಗಳು 19 ಚಿನ್ನ, 10 ಬೆಳ್ಳಿ, 07 ಕಂಚಿನ ಪದಕಗಳೊಂದಿಗೆ ಒಟ್ಟು 36 ಪದಕಗಳನ್ನು ಗೆದ್ದಿದ್ದಾರೆ. ಬಾಲಕಿಯರ ವಿಬಾಗದಲ್ಲಿ 10 ಅಂಕ ಪಡೆದ ಜ್ಯೋತ್ಸ್ನಾ ಸಿಮೋ ಮಂಗಲವಾಡ್ಕರ್ ಹಾಗೂ ಬಾಲಕರ ವಿಬಾಗದಲ್ಲಿ 10 ಅಂಕ ಪಡೆದ ಮಿಲನ್ ಎಂ.ಸಿ. ವೈಯಕ್ತಿಕ ಪ್ರಶಸ್ತಿ ಪಡೆದರು. ಇದರೊಂದಿಗೆ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಳ್ವಾಸ್‍ನ 26 ಕ್ರೀಡಾಪಟುಗಳ ಆಯ್ಕೆಯಾಗಿದ್ದಾರೆ.

alvas pu sports (1)
ಬಾಲಕರ ವಿಭಾಗದಲ್ಲಿ ಆಳ್ವಾಸ್ ಪ.ಪೂ. ಕಾಲೇಜಿನ ಎಲ್.ಕೆ.ಅಭಿಷೇಕ್ (100 ಮೀ-ತೃತೀಯ, 4×100 ರಿಲೇ – ದ್ವಿತೀಯ), ನವನೀತ್ ಎಂ. (400ಮೀ, 4×400 ರಿಲೇ – ಪ್ರಥಮ), ಮಹಾಮತೇಶ್ (400ಮೀ-ದ್ವಿತೀಯ, 4×400 ರಿಲೇ – ಪ್ರಥಮ) ಮಿಲನ್ ಎಂ.ಸಿ(800ಮೀ, 1500ಮೀ – ಪ್ರಥಮ), ಆಶ್ರಿತ್ (800ಮೀ-ತೃತೀಯ) ಓಂಕಾರ್(ಗುಡ್ಡಗಾಡು ಓಟ -ತೃತೀಯ), ಎಚ್.ಎಂ. ಸತೀಶ್ (ಗುಡ್ಡಗಾಡು ಓಟ-ಚತುರ್ಥ) ಕೃಷ್ಣ ಆರ್.ಜೆ.(400ಮೀ ಹರ್ಡಲ್ಸ್-ಪ್ರಥಮ), ದಯಾನಂದ್ ಜಾನ್(110ಮೀ ಹರ್ಡಲ್ಸ್-ಪ್ರಥಮ), ಸೌರವ್ ತನ್ವರ್ (ಗುಂಡು ಎಸೆತ-ಪ್ರಥಮ, ಡಿಸ್ಕಸ್ ತ್ರೋ -ತೃತೀಯ), ನಾಗೇಂದ್ರ ಅಣ್ಣಪ್ಪ (ಗುಂಡು ಎಸೆತ-ದ್ವಿತೀಯ, ಡಿಸ್ಕಸ್ ತ್ರೋ -ಪ್ರಥಮ) ಸಮರ್ ಸಿಂಗ್(ಜಾವೆಲಿನ್ ತ್ರೊ – ಪ್ರಥಮ ಸ್ಥಾನ), ರಾಹುಲ್ ರಾಮ ತೊರಸೆ (ಹ್ಯಾಮರ್ ತ್ರೊ – ಪ್ರಥಮ), ದೇವರಾಜ್ ಡಿ.(5ಕಿ.ಮೀ ನಡಿಗೆ-ಪ್ರಥಮ), ದಿಲನ್ ಎಂ.ಜಿ. (4×100 ರಿಲೇ ದ್ವಿತೀಯ), ಮನೋಜ್ ಎಲ್.(4×100 ರಿಲೇ ದ್ವಿತೀಯ), ವಿವೇಕ್ (4×100 ರಿಲೇ ದ್ವಿತೀಯ), ನಟರಾಜ ಜೆ. (4×400 ರಿಲೇ ಪ್ರಥಮ), ವಿಠಲ್ ಇಂಗ್ಲೆ(4×400 ರಿಲೇ ಪ್ರಥಮ) ಸ್ಥಾನ ಗೆದ್ದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಜ್ಯೋತ್ಸ್ನಾ (100 ಮೀ, 200ಮೀ – ಪ್ರಥಮ, 4×100 ರಿಲೇ-ದ್ವಿತೀಯ), ಮಾಲಾಶ್ರೀ (ಗುಡ್ಡಗಾಡು ಓಟ – ಪ್ರಥಮ), ಚೈತ್ರಾ ಪಿ.(ಗುಡ್ಡಗಾಡು ಓಟ – ದ್ವಿತೀಯ, 4×400 ರಿಲೇ-ತೃತೀಯ,), ರಕ್ಷಿತಾ ವಿ.ಪಿ. (ಗುಡ್ಡಗಾಡು ಓಟ-ಐದನೇ ಸ್ಥಾನ), ಪಲ್ಲವಿ ಪಾಟೀಲ್(ಎತ್ತರ ಜಿಗಿತ -ತೃತೀಯ), ಅನಿತಾ ವಿ.ಎಸ್. (ತ್ರಿವಿಧ ಜಿಗಿತ – ಪ್ರಥಮ), ಅಂಕಿತಾ ಎಂ.ಎಸ್. (ಉದ್ದ ಜಿಗಿತ, ತ್ರಿವಿಧ ಜಿಗಿತ-ದ್ವಿತೀಯ), ಸಿಂಧು ಭಟ್(ಪೋಲ್‍ವಾಲ್ಟ್ -ಪ್ರಥಮ), ಅಕ್ಷತಾ ಬುರ್ಲಿ(ಗುಂಡು ಎಸೆತ-ದ್ವಿತೀಯ), ಸೃಷ್ಟಿ ಕಲಿವಾಲ್(ಚಕ್ರ ಎಸೆತ -ಪ್ರಥಮ), ವೀಕ್ಷಾ (ಹ್ಯಾಮರ್ ಎಸೆತ-ಪ್ರಥಮ), ಧನುಷಾ ಶೆಟ್ಟಿ (3ಕಿ.ಮೀ ನಡಿಗೆ-ಪ್ರಥಮ), ಸಿಂಚನಾ ಎಂ.ಎಸ್.(4×100 ರಿಲೇ ದ್ವಿತೀಯ), ಶ್ರೀದೇವಿಕಾ ವಿ.ಎಸ್. (100ಮೀ ಹರ್ಡಲ್ಸ್, 4×100 ರಿಲೇ -ದ್ವಿತೀಯ), ಸಿಂಧು ಆರ್. (100ಮೀ ಹರ್ಡಲ್, 4×400 ರಿಲೇ-ತೃತೀಯ, 400ಮೀ ಹರ್ಡಲ್ಸ್-ದ್ವಿತೀಯ), ರಂಜಿತಾ ಜಿ. (4×400 ರಿಲೇ-ತೃತೀಯ), ಸಂಧ್ಯಾ ಕೆ.ಆರ್.( 4×400 ರಿಲೇ-ತೃತೀಯ,), ಪದಕವನ್ನು ಪಡೆದರು.
ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹಾಗೂ ಪ್ರಾಂಶುಪಾಲ ರಮೇಶ್ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.

By suddi9

Leave a Reply

Your email address will not be published. Required fields are marked *