ಮೂಡುಬಿದಿರೆ: ಕ್ರೀಡಾ ಚಟುವಟಿಕೆಗಳಲ್ಲಿ ಇರುವಂತಹ ಉತ್ಸಾಹ ಆರೋಗ್ಯಕ್ಕಾಗಿ ಹೂಡುವ ಬಂಡವಾಳವಾಗಿದೆ. ಮನಸ್ಸು ಯಾವುದೇ ಗೊಂದಲವಿಲ್ಲದೆ ಸುಂದರವಾಗಿದ್ದಾಗ ಜೀವನವೂ ಉತ್ಸಾಹದಿಂದ ಕೂಡಿರುತ್ತದೆ ಎಂದು ಕರ್ನಾಟಕ ಕೋಸ್ಟ್ ಗಾರ್ಡ್ ಕಮಾಂಡರ್ ಮೇಜರ್ ಎಸ್.ಎಸ್. ದಾಸಿಲಾ ಹೇಳಿದರು.
ಸ್ವರಾಜ್ಯ ಮೈದಾನದ ಸಿಂಥೆಟಿಕ್ ಟ್ರ್ಯಾಕ್ ಕ್ರೀಡಾಂಗಣದಲ್ಲಿ ರೋಟರಿ ಜಿಲ್ಲೆ 3181ವಲಯ 4ರ ವಲಯ ಕ್ರೀಡಾ ಕೂಟ’ ಲಕ್ಷ್’ ಇದರ ಸಮಾರೋಪದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಬಹುಮಾನ ವಿತರಣೆ ನಡೆಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ಕ್ರೀಡಾ ಪಟುವಾಗಿದ್ದ ಮೂಡುಬಿದಿರೆಯ ಎಂ. ಗೋಪಾಲ್ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್,ರೋಟರಿ ಜಿಲ್ಲೆಯ ನಿಯೋಜಿತ ರಾಜ್ಯಪಾಲ ಎಂ.ರಂಗನಾಥ ಭಟ್ ಅತಿಥಿಯಾಗಿದ್ದರು.
ಮೂಡುಬಿದಿರೆ ರೋಟರಿ ಅಧ್ಯಕ್ಷ ಡಾ.ರಮೇಶ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಕ್ರೀಡಾ ಸಮಿತಿ ಅಧ್ಯಕ್ಷ ಡಾ.ಸದಾನಂದ ನಾಯ್ಕ್ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಬಹುಮಾನಿತರ ವಿವರ ನೀಡಿದರು. ಕಾರ್ಯದರ್ಶಿ ಸಿ.ಹೆಚ್. ಅಬ್ದುಲ್ ಗಫೂರ್ ವಂದಿಸಿದರು. ಎಸಿಸ್ಟೆಂಟ್ ಗವರ್ನರ್ ಪ್ರಕಾಶ್ ಕಾರಂತ್ ಕ್ರೀಡಾಕೂಟವನ್ನು ಉದ್ಘಾಟಿಸಿದ್ದರು.

