ವಿಟ್ಲ: ಸಿಪಿಸಿಆರ್‍ಐ ಬಳಿ ರಾಜಹಂಸ ಬಸ್ ನಿಲುಗಡೆಗೆ ಕೆ ಎಸ್ ಆರ್ ಟಿ ಸಿ ಪುತ್ತೂರು ವಿಭಾಗದ ಡಿವಿಜನಲ್ ಕಂಟ್ರೋಲ್ ಆದೇಶ ನೀಡಿದೆ. ವಿಟ್ಲ ಸಿಪಿಸಿಆರ್‍ಐ ಬಳಿ ಈ ವರೆಗೆ ಕೆಎಸ್‍ಆರ್‍ಟಿಸಿ ರಾಜಹಂಸ ಬಸ್ ನಿಲುಗಡೆ ಇಲ್ಲದೆ ಸಿಪಿಸಿಆರಐ ಬರುವ ರೈತರಿಗೆ ಮತ್ತು ಇಲ್ಲಿನ ನಾಗರಿಕರಿಗೆ ತೊಂದರೆಯಾಗುತ್ತಿತ್ತು.

ಇದಕ್ಕಾಗಿ ಸಿಪಿಸಿಆರ್‍ಐ ನ ರಿಕ್ರಿಯೇಶನ್ ಕ್ಲಬ್‍ನ ಅಧ್ಯಕ್ಷ ಡಾ| ಸಿ ಟಿ ಜೋಸ್, ಕಾರ್ಯದರ್ಶಿ ಡಾ| ಎನ್ ಆರ್ ನಾಗರಾಜ ಸದಸ್ಯರಾದ ವಿನೋದ್ ಕೋಡೋತ್ ಮತ್ತು ಬಿ ಆನಂದ ರವರು ಪುತ್ತೂರು ಶಾಸಕ ಸಂಜೀವ ಮಠಂದೂರು, ವಿಟ್ಟಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ ಹಾಗೂ ಕೆಎಸ್‍ಆರ್‍ಟಿಸಿ ಪುತ್ತೂರು ವಿಭಾಗದ ಡಿವಿಜನಲ್ ಕಂಟ್ರೋಲರಿಗೆ ಮನವಿ ಸಲ್ಲಿಸಿದ್ದರು.

ಮನವಿಗೆ ಸ್ಪಂದಿಸಿ ರಾಜಹಂಸ ಹಾಗೂ ಇತರ ಎಕ್ಸ್‍ಪ್ರೆಸ್ ಬಸ್ಸುಗಳ ನಿಲುಗಡೆ ಸಹಕರಿಸಿದ ಶಾಸಕರಿಗೆ, ಪಟ್ಟಣ ಪಂಚಾಯತ್ ಅಧ್ಯಕ್ಷರಿಗೆ ಮತ್ತು ಕೆಎಸ್‍ಆರ್‍ಟಿಸಿ ಯವರಿಗೆ ಸಿಪಿಸಿಆರ್‍ಐ ಯವರು ಮತ್ತು ಊರವರು ಅಭಿನಂದನೆ ಸಲ್ಲಿಸಿರುತ್ತಾರೆ.

By suddi9

Leave a Reply

Your email address will not be published. Required fields are marked *