ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ನಿರ್ಮಾಣ ಮಾಡಲು ನಿಡಿದ ಅನುದಾನವನ್ನು ಅದರ ಅಭಿವೃದ್ಧಿಗಾಗಿ ಬಳಸದೇ ಕಸಾಯಿಖಾನೆಗೆ ಹಣ ಬಳಸಿರುವ ಹಿನ್ನೆಲೆಯಲ್ಲಿ ಸಚಿವ ಯು.ಟಿ. ಖಾದರ್ ಹೊಸ ಚರ್ಚೆಗೆ ಕಾರಣವಾಗಿದ್ದಾರೆ. ಈ ವಿಷಯದ ಕುರಿತು ಖಾದರ್ ಸ್ಪಷ್ಟತೆ ನೀಡಬೇಕು ಎಂದು ಭಾನುವಾರ ಕಾರ್ಕಳ ಶಾಸಕ ಸುನಿಲ್ ಕುಮಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
15ಕೋಟಿ ರೂ.ಹಣವನ್ನು ಕಸಾಯಿಖಾನೆಗೆ ಬಳಸಿರುವುದು ವಿಷಾಧನೀಯ. ಹಾಗೂ ಇಂತಹ ಅನ್ಯಾಯ ನಡೆಯಲು ಬಿಡುವುದಿಲ್ಲ. ಇದು ಕೇವಲ ಮಹಾನಗರ ಪಾಲಿಕೆ ಸಂಬಂಧಿಸಿದ ವಿಷಯವಲ್ಲ, ಬದಲಾಗಿ ಮೂರು ಜಿಲ್ಲೆಗಳಲ್ಲಿ ಇದರ ವಿರುದ್ಧ ದೊಡ್ಡ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಇವರು ಹಿಂದೂ ವಿರೋಧಿ ನೀತಿಯನ್ನು ತಕ್ಷಣ ಕೈಬಿಡಬೇಕು ಹಾಗೂ ಇವರು ಅಪರಾಧ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಸರ್ಕಾರ ನೀಡುವಂತಹ ಹಣ ಅಭಿವೃದ್ಧಿಯ ಕೆಲಸಕ್ಕೆ ಉಪಯೋಗವಾಗಲಿ. ಖಾದರ್ ಕಸಾಯಿಖಾನೆ ಬಗ್ಗೆ ಜಾಸ್ತಿ ಆಸಕ್ತಿ ಹೊಂದಿದ್ದಾರೆ ಎಂದು ಸುನೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

