ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು.

ಆಡಳಿತಾಧಿಕಾರಿ ಸಿ.ಶ್ರೀಧರ್ ಮಾತನಾಡಿ, “ನಾವು ಗಾಂಧೀಜಿಯವರ ಮಾನವೀಯ ಸಂಬಂಧವನ್ನು ಹಾಗೂ ತತ್ವವನ್ನು ಸಂರಕ್ಷಿಸಬೇಕು. ನಮ್ಮಲ್ಲಿರುವ ಮಾನವೀಯ ಗುಣಗಳನ್ನು ವೃದ್ಧಿಸುತ್ತಾ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ.ವಿ.ಶೆಟ್ಟಿ , ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೇಸ್.ಪಿ.ಸಲ್ಡಾನಾ ಉಪಸ್ಥಿತರಿದ್ದರು. ಸರ್ವಧರ್ಮ ಪ್ರಾರ್ಥನೆ, ಧಾರ್ಮಿಕ ಗ್ರಂಥಗಳ ಪಠಣ ಮೂಲಕ ಗಾಂಧಿ ಜಯಂತಿಯ ಆಚರಿಸಲಾಯಿತು.

