ವಿಟ್ಲ: ಶ್ರೀ ದೇವತಾ ಸಮಿತಿ ಇದರ 47ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವವು ದಿನಾಣಕ 15-10-2018- ರಿಂದ 20-10-2018 ರ ತನಕ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಸಮಿತಿ ಅಧ್ಯಕ್ಷ ರಾಧಕೃಷ್ಣ ನಾಯಕ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಸಮಿತಿ ಕಾರ್ಯದರ್ಶಿ ವಿ ಗೋಕುಲ್‍ದಾಸ್ ಶೆಣೈ, ಉಪಾಧ್ಯಕ್ಷ ವಿ ಅಶೋಕ್ ಕುಮಾರ್ ಶೆಟ್ಟಿ, ಸುದರ್ಶನ ಪಡಿಯಾರ್, ಮೈತ್ರೇಯಿ ಗುರುಕುಲದ ಜಗನ್ನಾಥ ಕಾಸರಗೋಡು, ಪ್ರೀಯಾ ಶಾಮಿಯಾನಾದ ಮಾಲಕ ಬಾಬು ಕೊಪ್ಪಳ, ಇತರ ಸದಸ್ಯರು ಉಪಸ್ಥಿತರಿದ್ದರು
