ಅಡ್ಯನಡ್ಕ: ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಅಡ್ಯನಡ್ಕ ಜನತಾ ಪ್ರೌಢಶಾಲೆಯಲ್ಲಿ ಆ.31ರಂದು ವಿಟ್ಲ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಜರುಗಿತು. ಜನತಾ ವಿದ್ಯಾಸಂಸ್ಥೆಗಳ ಸಂಚಾಲಕರಾದ ಡಾ.ಅಶ್ವಿನಿ ಕೃಷ್ಣಮೂರ್ತಿ ವಾರಣಾಶಿ ಅವರು ಪಂದ್ಯಾಟವನ್ನು ಉದ್ಘಾಟಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಅಡ್ಯನಡ್ಕ ಎಜುಕೇಷನಲ್ ಸೊಸೈಟಿಯ ಆಡಳಿತಾಧಿಕಾರಿ ರಮೇಶ ಎಂ ಬಾಯಾರ್, ಮುಖ್ಯೋಪಾಧ್ಯಾಯ ಟಿ.ಆರ್.ನಾಯ್ಕ್, ಜನತಾಪ. ಪೂ. ಕಾಲೇಜಿನ ಪ್ರಾಂಶುಪಾಲ ಡಿ.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ಫಲಿತಾಂಶದ ವಿವರ:
ಪ್ರಾಥಮಿಕ ಶಾಲಾ 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಸೈಂಟ್ ರೀಟಾ ಆಂಗ್ಲಮಾಧ್ಯಮ ಹಿ. ಪ್ರಾ. ಶಾಲೆ ವಿಟ್ಲ ಪ್ರಥಮ, ಸರಕಾರಿ ಮಾದರಿ ಹಿ. ಪ್ರಾ.ಶಾಲೆ ವಿಟ್ಲ ದ್ವಿತೀಯ; ಬಾಲಕಿಯರ ವಿಭಾಗದಲ್ಲಿ ಸರಕಾರಿ ಮಾದರಿಹಿ. ಪ್ರಾ. ಶಾಲೆ ಒಕ್ಕೆತ್ತೂರು ಪ್ರಥಮಸ್ಥಾನ ಪಡೆಯಿತು. 17ರ ವಯೋ ಮಾನದ ಬಾಲಕರ ಮತ್ತು ಬಾಲಕಿಯರ ಎರಡೂ ವಿಭಾಗದಲ್ಲಿ ಸೈಂಟ್ ರೀಟಾ ಆಂಗ್ಲಮಾಧ್ಯಮ ಪ್ರೌಢಶಾಲೆ ವಿಟ್ಲ ಪ್ರಥಮ ಮತ್ತು ವಿಠಲ ಪ್ರೌಢಶಾಲೆ ವಿಟ್ಲ ದ್ವಿತೀಯ ಸ್ಥಾನ ಪಡೆಯಿತು.
.
