
ಮಂಗಳೂರು: ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹಿರಿಯ ಸಾಹಿಸಿ ಅನಂತ ಮೂರ್ತಿ ನಿಧನದಂದು ಪಟಾಕಿ ಸಿಡಿಸಿ ಸಂಭ್ರಮಿಸಿದ ಆರೋಪದಲ್ಲಿ ಮತ್ತೆ ಮೂವರನ್ನು ಬಂಧಿಸಲಾಗಿದೆ. ಬಂಧಿತರು ಬಿಜೈ ನಿವಾಸಿಗಳಾದ ನಾಗರಾಜ ಸಾಲ್ಯಾನ್, ಮೋಹಿತ್, ರಾಮಕೃಷ್ಣ, ಎಂದು ಗುರುತಿಸಲಾಗಿದೆ. ಆರೋಪದಲ್ಲಿ ಮೂವರನ್ನು ಕದ್ರಿ ಪೊಲೀಸರು ಈಗಾಗಲೇ ಬಂಧಿಸಿದ್ದರು. ಕದ್ರಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು
