ವಿಟ್ಲ: ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಇದರ ಜಂಟಿ ಆಶ್ರಯದಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬಳಿ ವನ ಮಹೋತ್ಸವ ಮತ್ತಿ ಸಸಿ ವಿತರಣಾ ಕಾರ್ಯಕ್ರಮವು ಸಸ್ಯ ಶ್ಯಾಮಲ ವಿಟ್ಲ ಇದರ ಸಹಕಾರದೊಂದಿಗೆ ಆ.12 ಭಾನುವಾರನಡೆಯಿತು.
ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರಾಮದಾಸ ಶೆಣೈ, ಸಸ್ಯ ಶ್ಯಾಮಲಾದ ದಿನೇಶ್ ನಾಯಕ್, ಕೃಷ್ಣಯ್ಯ ಕೆ ವಿಟ್ಲ ಅರಮನೆ, ಡಾ| ಗೀತಾಪ್ರಕಾಶ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಮನೋಜ್ ರೈ, ಲಯನೆಸ್ ಅಧ್ಯಕ್ಷೆ ಸುಮಿತ್ರ, ಲಿಯೋ ಅಧ್ಯಕ್ಷ ಅನ್ವೇಶ್, ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್ ಮತ್ತು ಲಿಯೋ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂತೋಷ್ ಕುಮಾರು ಸ್ವಾಗತಿಸಿದರು. ಮಂಗೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಿಭಾಶ್ಚಂದ್ರ ನಾಯಕ್ ವಂದಿಸಿದರು.

