ಬೆಳ್ತಂಗಡಿ: ಗ್ರಾ.ಪಂ. ಆಡಳಿತ ಮಳೆ ನೀರು ಹೋಗುವ ಚರಂಡಿಯಲ್ಲಿ ಪೈಪ್ ಲೈನ್ ಅಳವಡಿಸಿರುವ ವಿದ್ಯಮಾನ ಅಳದಂಗಡಿಯಲ್ಲಿ ನಡೆದಿದೆ.
ಅಳದಂಗಡಿ ಗ್ರಾ.ಪಂ ಮತ್ತು ಬಸ್‍ನಿಲ್ದಾಣದ ಬಳಿ ಮಾರುಕಟ್ಟೆಗೆ ಹೋಗುವ ದಾರಿಯ ಬದಿಯಲ್ಲಿಚರಂಡಿಯೊಂದು ಹಾದು ಹೋಗಿದೆ. ಸಾಮಾನ್ಯಚರಂಡಿಯಾಗಿದ್ದು ನೀರು ಮಾತ್ರ ಹೋಗುವಂತಿದೆ. ಇದೇಚರಂಡಿಯಲ್ಲಿ ಹೋಟೇಲು ಕೊಳಚೆ ನೀರಿನ ಕೊಳವೆಯನ್ನೂ ಜೋಡಿಸಲಾಗಿದೆ. ಇದುಅಲ್ಲಿನ ನಾಗರಿಕರ ಹುಬ್ಬೇರಿಸಿದೆ.

5aladangady_pipe_line
ಸಾಮಾನ್ಯವಾಗಿ ಮಳೆಗಾಲ ಮುಗಿದ ಮೇಲೆ ಚರಂಡಿಯಲ್ಲಿ ಹೂಳು, ಕಸ ಕಡ್ಡಿತುಂಬಿ ಮುಚ್ಚಿರುವ ಸ್ಥಿತಿಯಲ್ಲಿ ಇರುತ್ತದೆ. ಮತ್ತೆ ಮಳೆಗಾಲ ಹತ್ತಿರ ಬಂದಾಗಅದರ ಹೂಳನ್ನು ತೆಗೆಯಲಾಗುತ್ತದೆ. ಆದರೆಇಲ್ಲಿನಚರಂಡಿಯ ಸ್ಥಿತಿಯನ್ನು ನೋಡಿದರೆ ಹೂಳು ತೆಗೆಯುವಂತಿಲ್ಲ. ಯಾಕೆಂದರೆ ಪಿವಿಸಿ ಪೈಪ್ ಹಾದು ಹೋಗಿರುವುದ್ದು ಹೂಳು ತೆಗೆಯಲು ಹೋದರೆಅದುಒಡೆಯುವ ಸಾಧ್ಯತೆಇರುತ್ತದೆ. ಚರಂಡಿ ಸ್ವಚ್ಚಗೊಳಿಸದಿದ್ದರೆ ಮಳೆ ನೀರುಅಂಗಡಿ ಮುಂಗಟ್ಟುಗಳ ಮುಂದೆ ಸಂಗ್ರಹವಾಗುವ ಸಾಧ್ಯತೆಇದೆ. ಅಕಸ್ಮಾತ್ ಪೈಪ್‍ಒಡೆದು ಹೋದರೆ ಪೇಟೆಯಿಡಿದುರ್ನಾತ ಬೀರುವ ಸಾಧ್ಯತೆಯೂ ಇದೆ.
ಇಷ್ಟೆಲ್ಲಾಗೊತ್ತಿದ್ದೂ ಪಂ. ಆಡಳಿತ ಈ ರೀತಿಯ ವ್ಯವಸ್ಥೆಯನ್ನು ಮಾಡಿರುವುದು ವಿಚಿತ್ರವಾದರೂ ಸತ್ಯವಾಗಿದೆ. ಇನ್ನಾದರೂತ್ಯಾಜ್ಯ ಹೋಗುವ ಕೊಳವೆಯನ್ನು ಬೇರೆಡೆ ಸ್ಥಳಾಂತರಿಸುವರೇ ಕಾದು ನೋಡಬೇಕಾಗಿದೆ.
ಫೊಟೊ-5ಅಳದಂಗಡಿ ಪೈಪ ಲೈನ್

By suddi9

Leave a Reply

Your email address will not be published. Required fields are marked *