ಬೆಂಗಳೂರು: ಕೇಂದ್ರ ರೈಲ್ವೆ ಸಚಿವ ಡಿ ವಿ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ವಿರುದ್ಧ ಆರೋಪ ಮಾಡಿದ ಸಿನಿಮಾ ನಟಿ ಮೈತ್ರಿಯಾ ಗೌಡ ಅವರು ಪೊಲೀಸ್ ವಿಚಾರಣೆಯಿಂದ ಬಳಲಿ ಕುಸಿದು ಬಿದ್ದ ಘಟನೆ ಇಂದು ನಡೆದಿದೆ.

maithriya-gowda
ಆರ್ ಟಿ ನಗರದ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು. ಆದರೆ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ ಮೈತ್ರಿಯಾ ಅವರ ಮನಕಡೆಗೆ ತೆರಳಿ ವಿಚಾರಣೆ ನಡೆಸಲು ಹೋಗಿದ್ದರು.
ಈ ವೇಳೆ ಸುಮಾರು 12 ಗಂಟೆಗಳ ಸುಧೀರ್ಘ ವಿಚಾರಣೆ ನಡೆದಿದೆ. ಈ ವೇಳೆ ಮೈತ್ರಿಯಾರಲ್ಲಿ ಹಲವಾರು ಸೂಕ್ಷ್ಮ ಪ್ರಶ್ನೆಗಳನ್ನು ಕೇಳಲಾಗಿದೆ ಎನ್ನಲಾಗಿದೆ.
ಮದುವೆ ನಡೆದ ಬಗ್ಗೆ, ಅದಕ್ಕೆ ಸಿಗಬೇಕಾದ ಸಾಕ್ಷಿ, ಆಗಾಗ ಭೇಟಿಯಾಗುತ್ತಿದ್ದ ಸ್ಥಳ, ವಿಮಾನ ಯಾನದ ದಾಖಲೆ, ಮದುವೆ ಸಂದರ್ಭ ತೆಗೆದ ಫೋಟೋ ಮುಂತಾದುವಗಳ ಬಗ್ಗೆ ವಿಚಾರಣೆ ನಡೆದಿದೆ. ಬಳಿಕ ಪೊಲೀಸರು 62 ಪುಟಗಳ ವರದಿ ಸಿದ್ಧಪಡಿಸಿದ್ದಾರೆ.
ಇದೆಲ್ಲಾ ಘಟನೆಯಿಂದ ಸುಸ್ತಾಗಿದ್ದ ಮೈತ್ರಿಯಾ ಇಂದು ಬೆಳಿಗ್ಗೆ ಆರುಗಂಟೆಯ ವೇಳೆಗೆ ದೃವಸ್ಥಾನವೊಂದಕ್ಕೆ ತೆರಳಿದ್ದ ಸಂದರ್ಭ ಕುಸಿದುಬಿದ್ದಿದ್ದಾರೆಂದು ತಿಳಿದುಬಂದಿದೆ.
ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ಕಾರ್ತಿಕ್: ತನ್ನ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿರುವುದರಿಂದ ಕಾರ್ತಿಕ್ ಗೌಡ ಅವರು ಹೈಕೋರ್ಟಿಗೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.

 

By suddi9

Leave a Reply

Your email address will not be published. Required fields are marked *